ಪ್ರತಿಷ್ಠಿತ ಬೂಡಲ್ಸ್ ಟೆನಿಸ್​ ಟೂರ್ನಿಗೆ ರಿಲಯನ್ಸ್​​ ಫೌಂಡೇಶನ್​ನಿಂದ ಇಎಸ್​ಎ ಕಪ್​ ಕೊಡುಗೆ​

relliance web
Published on

ಸ್ಟೋಕ್ ಪಾರ್ಕ್/ಮುಂಬೈ: ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ ಅವರು ಬಕಿಂಗ್‌ಹ್ಯಾಮ್‌ಶೈರ್‌ನ ಸ್ಟೋಕ್ ಪಾರ್ಕ್‌ನಲ್ಲಿ ನಡೆದ ಬೂಡಲ್ಸ್ ಟೆನಿಸ್ ಟೂರ್ನಿಯ ಮೊದಲ ದಿನದ ವಿಜೇತರಾದ ಅರ್ಜೆಂಟೀನಾದ ಡಿಯಾಗೋ ಶ್ವಾರ್ಟ್ಜ್‌ಮನ್‌ಗೆ ಉದ್ಘಾಟನಾ ಆವೃತ್ತಿಯ ರಿಲಯನ್ಸ್ ಫೌಂಡೇಶನ್ ಇಎಸ್‌ಎ ಕಪ್ಅನ್ನು ವಿತರಿಸಿದರು. ಮುಂಬರುವ ವಿಂಬಲ್ಡನ್‌ ಚಾಂಪಿಯನ್‌ಷಿಪ್‌ಗೆ ಅತ್ಯಂತ ಉಪಯುಕ್ತ ಅಭ್ಯಾಸ ವೇದಿಕೆಯಾಗಿರುವ ಬೂಡಲ್ಸ್ ಟೂರ್ನಿಯು ವಿಶಿಷ್ಟವಾಗಿದೆ. ಈ ವರ್ಷ ತನ್ನ 19ನೇ ವಾರ್ಷಿಕೋತ್ಸವವನ್ನು ಆಚರಿಸಿರುವ ಸ್ಟೋಕ್​ ಪಾರ್ಕ್​ನ ಟೆನಿಸ್​ ಪ್ರದರ್ಶನ ಟೆನಿಸ್​ ಟೂರ್ನಿಯು ಈ ಬಾರಿ ಜೂನ್​ 27ರಿಂದ ಜುಲೈ 1ರವರೆಗೆ ನಡೆಯುತ್ತಿದೆ.

17ನೇ ಶತಮಾನದ ಸ್ಟೋಕ್ ಪಾರ್ಕ್‌ ಎಸ್ಟೇಟ್‌ನ ಅಂದಗೊಳಿಸಲಾದ ಹುಲ್ಲುಹಾಸಿನ ಮೇಲೆ ಸಾಟಿಯಿಲ್ಲದ ಆತಿಥ್ಯದ ಜೊತೆಗೆ ಟೆನಿಸ್ ಸೂಪರ್‌ಸ್ಟಾರ್‌ಗಳನ್ನು ಒಳಗೊಂಡಿರುವ ಉನ್ನತ-ಕ್ಯಾಲಿಬರ್ ಟೆನಿಸ್‌ನ ಒಂದು ಪ್ರಮುಖ ಮಿಶ್ರಣದ ಟೂರ್ನಿ ಇದಾಗಿದೆ. ಇದು ಮೋಜಿನ ಇಂಗ್ಲಿಷ್ ಗಾರ್ಡನ್ ಪಾರ್ಟಿ ವಾತಾವರಣವನ್ನು ಹೊಂದಿದೆ. ವಿಶ್ವ ದರ್ಜೆಯ ಟೆನಿಸ್ ಆಟವನ್ನು ನಿಕಟ ಪೈಪೋಟಿಯೊಂದಿಗೆ ಮತ್ತು ಸುಂದರವಾದ ಪರಿಸರದಲ್ಲಿ ಆಡಲಾಗುತ್ತದೆ. ರಿಲಯನ್ಸ್ ಫೌಂಡೇಶನ್ ಇಎಸ್‌ಎ (ESA-Education and Sports for All) ಕಪ್‌ನ ಪ್ರಶಸ್ತಿಯನ್ನು ದಿ ಬೂಡಲ್ಸ್ ಟೆನಿಸ್‌ ಟೂರ್ನಿಯ ಎಲ್ಲ 5 ದಿನಗಳಲ್ಲೂ ವಿತರಿಸಲಾಗುತ್ತದೆ. ಈ ವಿಶೇಷ ಪ್ರಶಸ್ತಿಯು ದಿ ಬೂಡಲ್ಸ್ ಟೆನಿಸ್‌ಗೆ ಹೊಸ ಸೇರ್ಪಡೆಯಾಗಿದೆ ಮತ್ತು 'ಎಲ್ಲರಿಗೂ ಶಿಕ್ಷಣ-ಕ್ರೀಡೆ' (ಇಎಸ್​ಎ) ಅಭಿಯಾನ ಭಾರತದಿಂದ ತನ್ನ ರೆಕ್ಕೆಗಳನ್ನು ಹರಡುವಂತೆ ಮಾಡಿದೆ.

ಮಂಗಳವಾರದಂದು(ಜೂನ್ 27) ನೀತಾ ಎಂ. ಅಂಬಾನಿ ಅವರು ಉದ್ಘಾಟನಾ ಆವೃತ್ತಿಯ ರಿಲಯನ್ಸ್ ಫೌಂಡೇಶನ್ ಇಎಸ್​ಎ ಕಪ್ ಅನ್ನು ವಿಜೇತರಾದ ಅರ್ಜೆಂಟೀನಾದ ಡಿಯಾಗೋ ಶ್ವಾರ್ಟ್ಜ್‌ಮನ್‌ಗೆ ವಿತರಿಸಿದರು ಮತ್ತು ಬ್ರಿಟನ್​ನ ಬಕಿಂಗ್‌ಹ್ಯಾಮ್‌ಶೈರ್ ಮೂಲದ 'ಆ್ಯಕ್ಷನ್​4ಯೂತ್​'ಗೆ ದೇಣಿಗೆ ನೀಡಿದರು. ಇದು ಇಂದಿನ ವಿಜೇತರ ಹೃದಯಕ್ಕೆ ಅತ್ಯಂತ ಹತ್ತಿರವಾದ ಸಂಗತಿಯಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ, 'ನಾವು ಕೆಲವು ಶ್ರೇಷ್ಠ ಟೆನಿಸ್‌ ಆಟಗಳನ್ನು ವೀಕ್ಷಿಸಲು ಮತ್ತು ಸಮುದಾಯವನ್ನು ಒಟ್ಟುಗೂಡಿಸುವಲ್ಲಿ ಕ್ರೀಡೆಯ ಮಹತ್ವವನ್ನು ಸಂಭ್ರಮಿಸಲು ಸಿಕ್ಕಿರುವ ಅದ್ಭುತ ವಾತಾವರಣ ಇದಾಗಿದೆ. ಉತ್ತಮ ಕ್ರೀಡಾ ಸ್ಪರ್ಧೆಯ ದಿನದ ಮೂಲಕ ದತ್ತಿ ಕಾರ್ಯಗಳಿಗೆ ಸೇವೆ ಸಲ್ಲಿಸುವ ಅವಕಾಶ ಲಭಿಸಿರುವುದು ಇದನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದೆ. ಈ ಸಮುದಾಯದ ಎಲ್ಲಾ ಯುವಜನರು ತಮ್ಮ ಆಯ್ಕೆಯ ಯಾವುದೇ ಕ್ರೀಡೆಯನ್ನು ಕೈಗೆತ್ತಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಮತ್ತು ಪ್ರೋತ್ಸಾಹಿಸುತ್ತೇನೆ. ನಿಮ್ಮಲ್ಲಿ ಮತ್ತು ನಿಮ್ಮ ಸುತ್ತಲಿನವರಿಗೆ ಉತ್ಸಾಹ, ದೃಢತೆ, ಸಕಾರಾತ್ಮಕ ಮನೋಭಾವ ಮತ್ತು ಜೀವನದ ಸ್ಥಿತಿಸ್ಥಾಪಕತ್ವದ ಮನೋಭಾವವನ್ನು ತರಲು ನಾವು ಆಶಿಸುತ್ತೇವೆ. ಅದರಿಂದ ಈ ಸಮುದಾಯವು ಇನ್ನೂ ಹೆಚ್ಚು ಆಕರ್ಷಕ ಸ್ಥಳವಾಗುತ್ತದೆ' ಎಂದರು.

ರಿಲಯನ್ಸ್ ಫೌಂಡೇಶನ್ (ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಿಎಸ್‌ಆರ್ ಭಾಗ) ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ ಅವರ ನೇತೃತ್ವದಲ್ಲಿ ನಡೆಸುತ್ತಿರುವ 'ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ' (ಇಎಸ್​ಎ)ಅಭಿಯಾನವು ಸಮಗ್ರ ಅಭಿವೃದ್ಧಿ ಕಾರ್ಯಕ್ರಮವಾಗಿದೆ. ಇದು ಎಲ್ಲಾ ಮಕ್ಕಳಿಗೂ ಶಿಕ್ಷಣ ಮತ್ತು ಕ್ರೀಡಾ ಅವಕಾಶದ ಮೂಲಕ ವಸರ್ವತೋಮುಖ ಅಭಿವೃದ್ಧಿ ಮತ್ತು ಸಮಾನತೆಯನ್ನು ಉತ್ತೇಜಿಸುವ ವಿವಿಧ ಉಪಕ್ರಮಗಳನ್ನು ಬೆಂಬಲಿಸುತ್ತದೆ. ಬೂಡಲ್ಸ್ ಟೆನಿಸ್ ಚಾಲೆಂಜ್​ ಮೂಲಕ ಇಎಸ್​ಎ ಅಭಿಯಾನವು ಭಾರತದ ಹೊರಗೂ ತನ್ನ ರೆಕ್ಕೆಗಳನ್ನು ಹರಡಿದೆ. ಭಾರತದಲ್ಲಿ ಲಕ್ಷಾಂತರ ಜನರ ಜೀವನದ ಮೇಲೆ ಪ್ರಭಾವ ಬೀರಿದ ನಂತರ, ಈ ಅಭಿಯಾನವು ಈಗ ಸ್ಟೋಕ್ ಪಾರ್ಕ್‌ನಲ್ಲಿರುವ ಮಕ್ಕಳ ಜೀವನವನ್ನು ಸ್ಪರ್ಶಿಸುವ ಗುರಿಯನ್ನು ಹೊಂದಿದೆ ಮತ್ತು ಪ್ರತಿಯೊಬ್ಬರಿಗೂ ಕ್ರೀಡೆಗಳು ಕೈಗೆಟಕುವಂತೆ ಮಾಡಲು ಪ್ರಯತ್ನಿಸುತ್ತದೆ ಮತ್ತು ಯುವ ತಲೆಮಾರಿನ ಜನರಿಗೆ ದೈನಂದಿನ ಜೀವನದಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತದೆ.

ಭಾರತದ ಕ್ರೀಡಾ ಪ್ರೋತ್ಸಾಹಕರಾದ ನೀತಾ ಎಂ. ಅಂಬಾನಿ ಅವರು ವಿವಿಧ ಕ್ರೀಡೆಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದಾರೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯೆ ಆಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ. ಭಾರತದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿವಿಧ ಅಥ್ಲೆಟಿಕ್ಸ್ ಸಂಸ್ಥೆಗಳು ಮತ್ತು ವಿವಿಧ ಕ್ರೀಡಾಪಟುಗಳನ್ನು ಬೆಂಬಲಿಸುವ ಮೂಲಕ ಭಾರತದಲ್ಲಿ ಒಲಿಂಪಿಕ್ ಆಂದೋಲನವನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಗಣನೀಯ ಕೊಡುಗೆ ನೀಡಿದ್ದಾರೆ.

2010ರಿಂದ ರಿಲಯನ್ಸ್ ಫೌಂಡೇಶನ್ ಗ್ರಾಮೀಣ ಪರಿವರ್ತನೆ, ಆರೋಗ್ಯ, ಶಿಕ್ಷಣ, ಅಭಿವೃದ್ಧಿಗಾಗಿ ಕ್ರೀಡೆ, ಮಹಿಳಾ ಸಬಲೀಕರಣ, ವಿಪತ್ತು ನಿರ್ವಹಣೆ, ಕಲೆ, ಸಂಸ್ಕೃತಿ ಮತ್ತು ಪರಂಪರೆ ಮತ್ತು ನಗರ ನವೀಕರಣಗಳಲ್ಲಿ ತನ್ನ ಉಪಕ್ರಮಗಳ ಮೂಲಕ ಭಾರತದಾದ್ಯಂತ 69.5 ಮಿಲಿಯನ್ ಜನರ ಜೀವನದ ಮೇಲೆ ಪ್ರಭಾವ ಬೀರಿದೆ. ಈ ವರ್ಷ ಭಾರತದಲ್ಲಿ ಇಎಸ್​ಎ ದಿನವನ್ನು ಹೆಣ್ಣು ಮಗುವಿಗೆ ಸ್ಫೂರ್ತಿ ನೀಡಲು ಮೀಸಲಿಡಲಾಗಿದೆ. 36 ಎನ್‌ಜಿಒಗಳಿಂದ 19,000 ಕ್ಕೂ ಹೆಚ್ಚು ಯುವತಿಯರು ಮತ್ತು 200 ವಿಶೇಷ ಮಕ್ಕಳು ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಿದರು. ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ, ಹೆಚ್ಚಿನ ಹುಡುಗಿಯರನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಾರೆ ಎಂದು ಆಶಿಸಿದ್ದಾರೆ.

2023ರ ದಿ ಬೂಡಲ್ಸ್ ಟೆನಿಸ್​ ಟೂರ್ನಿಯ ಪ್ರಮುಖಾಂಶಗಳು:
*ವಿಶ್ವದ ಅಗ್ರ 20 ಪುರುಷ ಟೆನಿಸ್ ಆಟಗಾರರಲ್ಲಿ ಏಳು ಮಂದಿ ದಿ ಬೂಡಲ್ಸ್ ಟೆನಿಸ್‌ನಲ್ಲಿ ಆಡುತ್ತಾರೆ. ಅವರಲ್ಲಿ ಸ್ಟೆಫಾನೋಸ್ ಸಿಟ್ಸಿಪಾಸ್ (ವಿಶ್ವ ನಂ.5), ಹೊಲ್ಗರ್ ರೂನ್ (ವಿಶ್ವ ನಂ.6) ಮತ್ತು ಆಂಡ್ರೆ ರುಬ್ಲೆವ್ (ವಿಶ್ವ ನಂ.7)ಪ್ರಮುಖರು.
*ಇದು ಭಾರತದ ಹೊರಗೆ ರಿಲಯನ್ಸ್ ಫೌಂಡೇಶನ್ ಬೆಂಬಲಿಸುವ 'ಎಲ್ಲರಿಗೂ ಶಿಕ್ಷಣ ಮತ್ತು ಕ್ರೀಡೆ'ಯ (ಇಎಸ್​ಎ)ಮೊದಲ ಪ್ರಶಸ್ತಿಯಾಗಿದೆ
*ಕೋವಿಡ್ ಸಾಂಕ್ರಾಮಿಕದ ನಂತರ ಈ ವರ್ಷ ಬೂಡಲ್ ಟೆನಿಸ್​ ಟೂರ್ನಿ ಮತ್ತೆ ಹಿಂದಿರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net