

ಅಕ್ಲೆಂಡ್: ಐಪಿಎಲ್‌ನಲ್ಲಿ ಆಡುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತಿದೆ. ಅದು ದೇಶೀಯ ಕ್ರಿಕೆಟಿಗನೇ ಆಗಿರಬಹುದು, ವಿದೇಶಿಗನೇ ಇರಬಹುದು. ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದೇ ಆತನ ಗುರಿಯಾಗಿರುತ್ತದೆ. ಭಾರತೀಯ ಆಟಗಾರರು ಬಹುತೇಕ ಐಪಿಎಲ್‌ನಲ್ಲೇ ಮಗ್ನರಾಗಿರುತ್ತಾರೆ. ಕೆಲವೊಮ್ಮೆ ವಿದೇಶಿ ಆಟಗಾರರು ತವರು ತಂಡ ಪ್ರತಿನಿಧಿಸುವ ಸಲುವಾಗಿ ಐಪಿಎಲ್‌ನಿಂದ ಎಷ್ಟೋ ಬಾರಿ ಹಿಂದೆ ಸರಿದಿದ್ದಾರೆ. ಐಪಿಎಲ್‌ಗಿಂತ ರಾಷ್ಟ್ರೀಯ ತಂಡ ಪ್ರತಿನಿಧಿಸುವುದೇ ಆಟಗಾರರ ಪ್ರಮುಖವಾಗಿರುತ್ತದೆ. ಆದರೆ, ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತನ್ನ ಐಪಿಎಲ್ ಆಟಗಾರರು ಪೂರ್ಣ ಪ್ರಮಾಣದಲ್ಲಿ ಲೀಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಭಯ ನೀಡಿದೆ.
ಇದನ್ನೂ ಓದಿ: ತಿಲಕ್ ಈಗ ಅಂಡರ್ ಕವರ್ ಪೊಲೀಸ್ ಅಧಿಕಾರಿ
ನ್ಯೂಜಿಲೆಂಡ್‌ನ ಐಪಿಎಲ್ ಆಟಗಾರರು ಜೂನ್ 2 ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅಲ್ಲದೆ, ಮಾರ್ಚ್ ಕೊನೇ ಹಾಗೂ ಏಪ್ರಿಲ್ ಮೊದಲ ವಾರದಲ್ಲಿ ನಡೆಯಲಿರುವ ಬಾಂಗ್ಲಾದೇಶ ಪ್ರವಾಸದಿಂದಲೂ ಹೊರಗುಳಿಯಲಿದ್ದಾರೆ. ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಲಾಕೀ ರ್ಗ್ಯುಸನ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀರ್ಟ್ ಐಪಿಎಲ್‌ನಲ್ಲಿ ಆಡಲಿರುವ ನ್ಯೂಜಿಲೆಂಡ್ ಆಟಗಾರರು. ಅಲ್ಲದೆ, ಕೈಲ್ ಜೆಮೀಸನ್ ಮೊದಲ ಬಾರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ.
ಏಪ್ರಿಲ್ ಎರಡನೇ ವಾರದಿಂದ ಆರಂಭವಾಗಲಿರುವ ಐಪಿಎಲ್, ಜೂನ್ ಮೊದಲ ವಾರದವರೆಗೂ ಸಾಗಲಿದೆ. ಜೂನ್ 2 ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಸರಣಿಯೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಭಾಗವಾಗಿಲ್ಲ. ನ್ಯೂಜಿಲೆಂಡ್ ತಂಡ ಈಗಾಗಲೇ ಡಬ್ಲ್ಯುಟಿಸಿಯಲ್ಲಿ ಫೈನಲ್ ಪ್ರವೇಶಿಸಿದೆ.