ಡ್ರಾನಲ್ಲಿ ಅಂತ್ಯಗೊಂಡ ಇಂಗ್ಲೆಂಡ್-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ

eng and nz match for web
Published on

ಲಂಡನ್: ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ. ಲಾರ್ಡ್ಸ್ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಪಂದ್ಯದಲ್ಲಿ 273 ರನ್ ಗೆಲುವಿನ ಬೆನ್ನಟ್ಟಿದ ಇಂಗ್ಲೆಂಡ್ ತಂಡ 3 ವಿಕೆಟ್‌ಗೆ 170 ರನ್ ಪೇರಿಸಲಷ್ಟೇ ಶಕ್ತವಾಯಿತು. ಅಂತಿಮ ದಿನದಾಟದಲ್ಲಿ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕುವ ಯೋಜನೆಯಲ್ಲಿದ್ದ ಕಿವೀಸ್ ನಿರಾಸೆ ಕಂಡಿತು.

ಇದಕ್ಕೂ ಮೊದಲು 2 ವಿಕೆಟ್‌ಗೆ 62 ರನ್‌ಗಳಿಂದ ದಿನದಾಟ ಆರಂಭಿಸಿದ ನ್ಯೂಜಿಲೆಂಡ್ 6 ವಿಕೆಟ್ 169 ರನ್‌ಗಳಿಸಿ ಡಿಕ್ಲೇರ್ ಘೋಷಿಸಿತು. ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 378 ರನ್‌ಗಳಿಸಿದರೆ, ಇಂಗ್ಲೆಂಡ್ 275 ರನ್ ಪೇರಿಸಿ 103 ರನ್ ಹಿನ್ನಡೆ ಕಂಡಿತ್ತು. ಉಭಯ ತಂಡಗಳ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗುರುವಾರದಿಂದ ಬರ್ಮಿಂಗ್‌ಹ್ಯಾಂನಲ್ಲಿ ನಡೆಯಲಿದೆ.

ನ್ಯೂಜಿಲೆಂಡ್: 378 ಮತ್ತು 6 ವಿಕೆಟ್‌ಗೆ 169, ಇಂಗ್ಲೆಂಡ್: 275 ಮತ್ತು 3 ವಿಕೆಟ್‌ಗೆ 170 (ಡೊಮಿನಿಕ್ ಸಿಬ್ಲೆ 60*, ಜೋ ರೂಟ್ 40, ನೀಲ್ ವಾಗ್ನರ್ 27ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net