More

    ಟೆಸ್ಟ್​ ವಿಶ್ವಕಪ್​ ಫೈನಲ್​ ಪಂದ್ಯದ ಫಾಲೋಆನ್​ ನಿಯಮದ ಬಗ್ಗೆ ಐಸಿಸಿ ಸ್ಪಷ್ಟನೆ

    ದುಬೈ: ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ ಪಂದ್ಯ ಡ್ರಾ ಅಥವಾ ಟೈ ಆದರೆ ಟ್ರೋಫಿ ಹಂಚಿಕೆ ಮಾಡುವ ಬಗ್ಗೆ ಈಗಾಗಲೆ ಸ್ಪಷ್ಟನೆ ನೀಡಿರುವ ಐಸಿಸಿ ಇದೀಗ ಪಂದ್ಯದಲ್ಲಿ ಫಾಲೋಆನ್​ ನಿಯಮ ಹೇಗಿರಲಿದೆ ಎಂಬ ಬಗೆಗಿನ ಗೊಂದಲಗಳಿಗೂ ತೆರೆ ಎಳೆದಿದೆ.

    ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯ 5 ದಿನಗಳ ಕಾದಾಟವಾಗಿರುತ್ತದೆ ಮತ್ತು ಮಳೆಯಿಂದ ಅಡಚಣೆಗೆ ಒಳಗಾದರೆ ಮೀಸಲು ದಿನವಾದ 6ನೇ ದಿನವೂ ಆಟ ನಡೆಯಲಿದೆ. ಹೀಗಾಗಿ ಒಟ್ಟು 6 ದಿನಗಳ ಕಾಲ ಪಂದ್ಯ ನಡೆಯುವ ಸಾಧ್ಯತೆಯೂ ಇರುವುದರಿಂದ ಐಸಿಸಿ ಫಾಲೋಆನ್​ ನಿಯಮದ ಬಗ್ಗೆ ಈಗಲೇ ಸ್ಪಷ್ಟಪಡಿಸಿದೆ. ಇದರನ್ವಯ ಹಾಲಿ ಇರುವ ಫಾಲೋಆನ್​ ನಿಯಮಗಳೇ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್ ಫೈನಲ್​ಗೂ ಅನ್ವಯಿಸಲಿದೆ. ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ.

    ಇದನ್ನೂ ಓದಿ: ಟೆಸ್ಟ್​ ವಿಶ್ವಕಪ್​ ಫೈನಲ್​ನಲ್ಲಿ ಭಾರತಕ್ಕಿರುವ ಹಿನ್ನಡೆಯನ್ನು ವಿವರಿಸಿದ ಯುವರಾಜ್​ ಸಿಂಗ್​

    ಐಸಿಸಿ ನಿಯಮದ ಅನ್ವಯ ಸಾಮಾನ್ಯವಾಗಿ 5 ದಿನಗಳ ಟೆಸ್ಟ್​ ಪಂದ್ಯದಲ್ಲಿ 200ಕ್ಕಿಂತ ಹೆಚ್ಚಿನ ರನ್​ ಹಿನ್ನಡೆ ಕಾಣುವ ತಂಡ ಫಾಲೋಆನ್​ಗೆ ಗುರಿಯಾಗುತ್ತದೆ. ಅದೇ 3 ಅಥವಾ 4 ದಿನಗಳ ಪಂದ್ಯವಾಗಿದ್ದರೆ, 150 ರನ್​ ಹಿನ್ನಡೆ ಕಾಣುವ ತಂಡವೂ ಫಾಲೋಆನ್​ಗೆ ಈಡಾಗುತ್ತದೆ. ಅಲ್ಲದೆ 2 ದಿನಗಳ ಪಂದ್ಯದಲ್ಲಿ 100 ಮತ್ತು 1 ದಿನದ ಪಂದ್ಯದಲ್ಲಿ 75 ರನ್​ ಹಿನ್ನಡೆ ಕಾಣುವ ತಂಡ ಫಾಲೋಆನ್​ಗೆ ಈಡಾಗುತ್ತದೆ. ಪಂದ್ಯದ ಮೊದಲ ಮತ್ತು 2ನೇ ದಿನದ ಆಟಗಳು ಮಳೆ ಅಥವಾ ಇತರ ಕಾರಣಗಳಿಂದಾಗಿ ನಡೆಯದೆ ಇದ್ದಾಗ ಈ 2, 3 ಮತ್ತು 1 ದಿನದ ಫಾಲೋಆನ್​ ನಿಯಮಗಳು ಅನ್ವಯಿಸುತ್ತವೆ. ಆದರೆ ಪಂದ್ಯದ ಮೊದಲ ದಿನದಾಟ ನಷ್ಟಗೊಂಡರೆ, ಮೀಸಲು ದಿನ ಇರುವ ಕಾರಣ ಇದು 5 ದಿನಗಳ ಪಂದ್ಯವಾಗಿಯೇ ಪರಿಗಣಿಸಲ್ಪಡಲಿದೆ.

    ಗರ್ಲ್​ಫ್ರೆಂಡ್​​ ಜತೆ ಬ್ರೇಕ್​ಅಪ್​ ಮಾಡಿಕೊಂಡರೇ ಕ್ರಿಕೆಟಿಗ ಇಶಾನ್​ ಕಿಶನ್​?

    100 ಕೆಜಿ ತೂಕದ ಈ ಕ್ರಿಕೆಟಿಗ ಪಾಕ್​ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ವಿವಾದ ಸೃಷ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts