

ಬೆಂಗಳೂರು: ಕರ್ನಾಟಕ ಅಥ್ಲೀಟ್ಗಳ ಬಹುದಿನಗಳ ಬೇಡಿಕೆಯಾಗಿದ್ದ ಕಂಠೀರವ ಸ್ಟೇಡಿಯಂಗೆ 400 ಮೀಟರ್ಗಳ ಹೊಸ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸುವ ಕಾರ್ಯಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಕೆ.ಪಿ.ಪುರುಷೋತ್ತಮ್ ಸೋಮವಾರ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ಟ್ರ್ಯಾಕ್ ನಿರ್ವಣಕ್ಕೆ ದೆಹಲಿಯ ಅಡ್ವಾನ್ಸ್ ಸ್ಪೋರ್ಟ್ಸ್ ಟೆಕ್ನಾಲಜಿ ಸಂಸ್ಥೆಗೆ ಗುತ್ತಿಗೆ ನೀಡಲಾಗಿದ್ದು, ನಿರ್ವಣಕ್ಕೆ 130 ದಿನ ಗಡುವು ನೀಡಲಾಗಿದೆ ಎಂದರು. ಸುಮಾರು 4.47 ಕೋಟಿ ರೂ ವೆಚ್ಚದಲ್ಲಿ ಟ್ರಾ್ಯಕ್ ನಿರ್ಮಾಣ ಮಾಡಲಾಗುತ್ತಿದ್ದು, ಕಾಮಗಾರಿ ವೇಳೆ ಹಂತ ಹಂತವಾಗಿ ಟ್ರಾ್ಯಕ್ ನಿರ್ವಣದ ಗುಣಮಟ್ಟ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಹಳೆಯ ಟ್ರ್ಯಾಕ್ ತೆಗೆಯಲು 30 ದಿನಗಳು ಬೇಕಾಗುತ್ತದೆ. ಬಳಿಕ 40 ದಿನಗಳ ಕಾಲ ಟ್ರಾ್ಯಕ್ ಜೋಡಣೆ ಕಾರ್ಯ ನಡೆಯಲಿದೆ. ಒಟ್ಟಾರೆ 130 ದಿನಗಳ ಬಳಿಕವಷ್ಟೇ ಕ್ರೀಡಾಪಟುಗಳ ಉಪಯೋಗಕ್ಕೆ ಟ್ರ್ಯಾಕ್ ಲಭ್ಯವಾಗಲಿದೆ ಎಂದು ಪುರುಷೋತ್ತಮ್ ‘ವಿಜಯವಾಣಿ’ಗೆ ತಿಳಿಸಿದರು.
ಟ್ರ್ಯಾಕ್ ನಿರ್ವಣದ ವೇಳೆ ಅಕಾಲಿಕ ಮಳೆ ಭೀತಿ ಎದುರಾಗುವ ಸಾಧ್ಯತೆಗಳಿವೆ. ಇದು ಟ್ರಾ್ಯಕ್ ನಿರ್ಮಾಣ ಕಾಮಗಾರಿಗೆ ಅಡ್ಡಿ ಮಾಡುವ ಆತಂಕ ಎದುರಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಪುರುಷೋತ್ತಮ್ ಮಳೆಗಾಲದ ವೇಳೆಗೆ ಟ್ರ್ಯಾಕ್ ನಿರ್ಮಾಣ ಮಾಡುವ ಗುರಿ ಹೊಂದಿದ್ದು, ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು ತಿಳಿಸಿದ್ದಾರೆ. ಹಲವು ವರ್ಷಗಳಿಂದ ರಾಜ್ಯದ ಕ್ರೀಡಾಪಟುಗಳು ಹದಗೆಟ್ಟ ಟ್ರ್ಯಾಕ್ ಬದಲಿಸಲು ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸುತ್ತಾ ಬಂದಿದ್ದರು. ಕಳಪೆ ಟ್ರ್ಯಾಕ್ ನಿಂದಾಗಿಯೇ ಹಲವು ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಕೂಟಗಳ ಆತಿಥ್ಯ ಬೆಂಗಳೂರಿನ ಕೈತಪ್ಪಿದ್ದವು.