ಐಪಿಎಲ್ ಆರಂಭಕ್ಕೂ ಮೊದಲೇ ಹೊಸ ಮೈಲಿಗಲ್ಲು ನೆಟ್ಟ ಚೆನ್ನೈ ಸೂಪರ್‌ಕಿಂಗ್ಸ್!

csk web
Published on

ಚೆನ್ನೈ: ಎಂಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಹೊಸ ಮೈಲಿಗಲ್ಲು ನೆಟ್ಟಿದೆ. ಐಪಿಎಲ್‌ನಲ್ಲಿ 100 ಕೋಟಿ ರೂ. ಮೊತ್ತದ ಪ್ರಾಯೋಜಕತ್ವ ಸಂಪಾದಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಸಿಎಸ್‌ಕೆ ತಂಡ ಪಾತ್ರವಾಗಿದೆ.

ಎಸ್‌ಎನ್‌ಜೆ ಗ್ರೂಪ್ ಜತೆಗೆ ಸಿಎಸ್‌ಕೆ ತಂಡ 3 ವರ್ಷಗಳ ಅವಧಿಗೆ ಹೊಸ ಪ್ರಾಯೋಜಕತ್ವಕ್ಕೆ ಸಹಿ ಹಾಕಿದೆ. ಇದರೊಂದಿಗೆ ಒಟ್ಟಾರೆ 100 ಕೋಟಿ ರೂ.ಗೂ ಅಧಿಕ ಮೊತ್ತದ ಪ್ರಾಯೋಜಕತ್ವ ಪಡೆದಂತಾಗಿದೆ. ಸಿಎಸ್‌ಕೆ ತಂಡ ಈಗಾಗಲೆ 10 ಕಂಪನಿಗಳ ಜತೆಗೆ ಶೀರ್ಷಿಕೆ, ಜೆರ್ಸಿ ಸಹಿತ ವಿವಿಧ ಪ್ರಾಯೋಜಕತ್ವ ಒಪ್ಪಂದಗಳನ್ನು ಹೊಂದಿದೆ.

ಆಟಗಾರರ ವೇತನಕ್ಕೆ ಈಗಾಗಲೆ ರಿಟೇನ್ ಮತ್ತು ಹರಾಜಿನಲ್ಲಿ ಒಟ್ಟಾರೆ 87.05 ಕೋಟಿ ರೂ. ವ್ಯಯಿಸಿರುವ ಸಿಎಸ್‌ಕೆ ತಂಡ, ಟೂರ್ನಿ ಆರಂಭಕ್ಕೆ ಮೊದಲೇ ಭರ್ಜರಿ ಲಾಭ ಗಳಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net