More

    ಹೊಸ ಪಾತ್ರದಲ್ಲಿ ಆರ್‌ಸಿಬಿ ತಂಡಕ್ಕೆ ಮರಳಲಿದ್ದಾರೆ ಎಬಿ ಡಿವಿಲಿಯರ್ಸ್‌?

    ಬೆಂಗಳೂರು: ಕಳೆದ ವರ್ಷ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳುವ ಮೂಲಕ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನೂ ತೊರೆದಿರುವ ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್‌, ಐಪಿಎಲ್‌ನೊಂದಿಗೆ ಮರಳಿ ನಂಟು ಬೆಳೆಸಲು ಸಜ್ಜಾಗಿದ್ದಾರೆ. ಎಬಿ ಡಿವಿಲಿಯರ್ಸ್‌ ಮೆಂಟರ್ ಆಗಿ ಹೊಸ ಪಾತ್ರದ ಮೂಲಕ ಆರ್‌ಸಿಬಿ ತಂಡಕ್ಕೆ ಮರಳುವ ನಿರೀಕ್ಷೆ ಇದೆ.

    ಆರ್‌ಸಿಬಿ ತಂಡ ಶನಿವಾರ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನ ಮ್ಯೂಸಿಯಂ ಕ್ರಾಸ್ ರಸ್ತೆಯಲ್ಲಿ ನಡೆಯಲಿರುವ ಸಾರ್ವಜನಿಕ ಸಮಾರಂಭದಲ್ಲಿ ತಂಡದ ಹೊಸ ನಾಯಕನ ಹೆಸರು ೋಷಿಸಲಿದೆ. ಅದೇ ವೇಳೆ ತಂಡದ ಇತರ ಸಹಾಯಕ ಸಿಬ್ಬಂದಿಯ ಹೆಸರನ್ನೂ ಪ್ರಕಟಿಸಲಿದ್ದು, ಎಬಿಡಿ ಅವರನ್ನು ತಂಡದ ಮಾರ್ಗದರ್ಶಕರಾಗಿ ಹೆಸರಿಸಲಿದೆ ಎನ್ನಲಾಗಿದೆ.

    2011ರಿಂದ 2021ರವರೆಗೂ ಆರ್‌ಸಿಬಿ ತಂಡದ ಆಟಗಾರರಾಗಿದ್ದ ಎಬಿ ಡಿವಿಲಿಯರ್ಸ್‌ 10 ವರ್ಷಗಳ ಅವಧಿಯಲ್ಲಿ ಆರ್‌ಸಿಬಿ ತಂಡದ ಪರ ಆಡಿದ 156 ಪಂದ್ಯಗಳಲ್ಲಿ 2 ಶತಕ, 37 ಅರ್ಧಶತಕಗಳ ಸಹಿತ 4,491 ರನ್ ಬಾರಿಸಿದ್ದರು. ಈ ಪೈಕಿ 238 ಸಿಕ್ಸರ್‌ಗಳು ಸೇರಿದ್ದವು.

    VIDEO: 6 ತಿಂಗಳ ಪುತ್ರಿಗೆ ಅರ್ಧಶತಕವನ್ನು ಅರ್ಪಿಸಿ ಸಂಭ್ರಮಿಸಿದ ಪಾಕ್ ನಾಯಕಿ ಬಿಸ್ಮಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts