ಇದೇನಾದ್ರೂ ಸಂಭವಿಸಿದ್ರೆ ವಿರಾಟ್​ ಕೊಹ್ಲಿ ದಾಖಲೆ ಮುರಿಯಲಿದ್ದಾರೆ ಈ ಸ್ಟಾರ್​ ಪ್ಲೇಯರ್​​​ | IPL 2025 Retention

ipl 2025
Published on

ನವದೆಹಲಿ: ಕಳೆದ ಒಂದೆರೆಡು ತಿಂಗಳಿಂದ ಕ್ರಿಕೆಟ್ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದ ಐಪಿಎಲ್​ ಹರಾಜು ಪ್ರಕ್ರಿಯೆ (IPL 2025 Retention) ದಿನ ಇದೀಗ ಕಡೆಗೂ ಆಗಮಿಸಿದ್ದು, ಇಂದು ಆಯಾ ಫ್ರಾಂಚೈಸಿಗಳು ಯಾರನ್ನು ತಮ್ಮ ತಂಡದಲ್ಲಿ ಉಳಿಸಿಕೊಳ್ಳಬೇಕು, ಯಾರನ್ನು ಬಿಡಬೇಕು ಎಂಬ ಲೆಕ್ಕಾಚಾರದಲ್ಲಿ ತೊಡಗಿದೆ. ಈ ಪೈಕಿ ಐಪಿಎಲ್​ ಇತಿಹಾಸದಲ್ಲಿ ಒಂದು ಬಾರಿಯೂ ಕಪ್​ ಗೆಲ್ಲದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಸ್ಟಾರ್​ ಪ್ಲೇಯರ್​ ವಿರಾಟ್​ ಕೊಹ್ಲಿ ಅವರ ಹಿಂದಿನ ದಾಖಲೆಯನ್ನು ಮುರಿಯಲು ಓರ್ವ ಸ್ಟಾರ್​ ಬ್ಯಾಟರ್​ ಇದೀಗ ತುದಿಗಾಲಿನಲ್ಲಿದ್ದಾರೆ ಎಂದು ವರದಿಯೊಂದು ಸೂಚಿಸಿದೆ.

ದೊಡ್ಡ ಬಿಡ್ಡಿಂಗ್​ ನಡೆಯಲಿದೆ

ಪ್ರಸ್ತುತ ನಡೆಯುತ್ತಿರುವ ಆಕ್ಷನ್​ ಪ್ರಕ್ರಿಯೆಯಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಹೆನ್ರಿಕ್ ಕ್ಲಾಸೆನ್​ಗಾಗಿ ಇತರೆ ತಂಡಗಳ ಹದ್ದಿನ ಕಣ್ಣು ಬಿದ್ದಿದ್ದು, ತಮ್ಮ ಟೀಮ್​ಗೆ ಬಲತುಂಬಿರುವ ಈ ಆಟಗಾರನನ್ನು ಎಸ್​ಆರ್​ಎಚ್​​ ಬಿಟ್ಟುಕೊಡಲು ಇಚ್ಚಿಸುತ್ತಿಲ್ಲ. ಹೀಗಿಗಾಗಿ ಇವರಿಗಾಗಿ ದೊಡ್ಡ ಬಿಡ್ಡಿಂಗ್​ ನಡೆಯಲಿದ್ದು, ಬರೋಬ್ಬರಿ 23 ಕೋಟಿ ರೂ.ಗೆ ವಿಕೆಟ್ ಕೀಪರ್​-ಬ್ಯಾಟರ್​ ಕ್ಲಾಸೆನ್​ರನ್ನು ಉಳಿಸಿಕೊಳ್ಳಲು ಸನ್​ರೈಸರ್ಸ್​ ಎದುರುನೋಡುತ್ತಿದೆ ಎನ್ನಲಾಗಿದೆ.

ದುಬಾರಿ ಆಟಗಾರ ವಿರಾಟ್ ಕೊಹ್ಲಿ

ಅಸಲಿಗೆ ಇದೇನಾದರೂ ನಿಜವಾದರೆ ಹೆನ್ರಿಕ್ ಕ್ಲಾಸೆನ್​ ಹೊಸ ದಾಖಲೆಗೆ ಸಾಕ್ಷಿಯಾಗಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಉಳಿಸಿಕೊಂಡ ಅತ್ಯಂತ ದುಬಾರಿ ಆಟಗಾರನಾಗಿ ಕ್ಲಾಸೆನ್ ಹೊರಹೊಮ್ಮಲಿದ್ದಾರೆ. 2018ರ ಐಪಿಎಲ್ ಹರಾಜಿನ ಮೊದಲು 18 ಕೋಟಿ ರೂ.ಗೆ ಆರ್​ಸಿಬಿಯಲ್ಲೇ ಉಳಿದುಕೊಂಡಿರುವ ಪ್ರಸ್ತುತ ದುಬಾರಿ ಆಟಗಾರ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಹೆನ್ರಿಕ್ ಮುರಿಯಲು ಸಜ್ಜಾಗಿದ್ದಾರೆ ಎಂದು ಸಂಗತಿ ಇದೀಗ ಆರ್​ಸಿಬಿ ಅಭಿಮಾನಿಗಳ ಹುಬ್ಬೇರಿಸುವಂತಿದೆ.

ಹೊಸ ದಾಖಲೆಯತ್ತ ಕ್ಲಾಸೆನ್​?

ಮತ್ತೊಂದು ವರದಿಯ ಪ್ರಕಾರ, ಕಳೆದ 10 ಸೀಸನ್‌ಗಳಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡದಲ್ಲಿಯೇ ಆಡಿರುವ ಸ್ಟಾರ್ ಆಲ್‌ರೌಂಡರ್, ಕೆರಿಬಿಯನ್ ಆಟಗಾರ​ ಆಂಡ್ರೆ ರಸೆಲ್ ಅವರನ್ನು ಕೈಬಿಡಲು ಇದೀಗ ಕೆಕೆಆರ್​ ಫ್ರಾಂಚೈಸಿ ಮುಂದಾಗಿದೆ. 2014ರಲ್ಲಿ ಕೆಕೆಆರ್​ ಪರ ತಮ್ಮ ಚೊಚ್ಚಲ ಐಪಿಎಲ್​ ಲೀಗ್ ಆಡಿದ ರಸೆಲ್​, 2017ರ ಸೀಸನ್​ ಹೊರತುಪಡಿಸಿ ಉಳಿದೆಲ್ಲಾ ಆವೃತ್ತಿಗಳಲ್ಲಿಯೂ ಆಡಿದ್ದಾರೆ. ಒಂದೆಡೆ ಹೊಸ ದಾಖಲೆಯತ್ತ ಕ್ಲಾಸೆನ್​ ಮುಂಚೂಣಿಯಲ್ಲಿದ್ದರೆ, ರಸೆಲ್​ ಯಾವ ತಂಡದ ಪಾಲಾಗಲಿದ್ದಾರೆ ಎಂಬುದು ಸದ್ಯ ಕ್ರೀಡಾಭಿಮಾನಿಗಳಲ್ಲಿ ಕೌತುಕ ಹೆಚ್ಚಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net