

ನವದೆಹಲಿ: ಹೆಡ್ ಕೋಚ್ ಆಗಿ ಜಸ್ಟಿನ್ ಲ್ಯಾಂಗರ್ ಮಾರ್ಗದರ್ಶನದಲ್ಲಿ ಹಾಗೂ ಕೆ.ಎಲ್. ರಾಹುಲ್ ನೇತೃತ್ವದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ಕಳೆದ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ಲೇಆಫ್ ಹಂತದವರೆಗೆ ತಲುಪಿತ್ತು. ಕ್ರಿಕೆಟ್ ಪ್ರಿಯರ ಮನಗೆದ್ದಿರುವ ಎಲ್ಸಿಜಿ, 2024ರ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸುವುದು ಪಕ್ಕಾ ಎಂದೇ ನಿರೀಕ್ಷಿಸಲಾಗಿತ್ತು. ಆದ್ರೆ, ಅಭಿಮಾನಿಗಳ ಆ ಕನಸು ಭಗ್ನಗೊಂಡಿತು. ಇದೀಗ ಹೊಸ ಸುದ್ದಿಯೊಂದು ವ್ಯಾಪಕವಾಗಿ ಸದ್ದು ಮಾಡುತ್ತಿದ್ದು, ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಎಂಟ್ರಿ ಕೊಡಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಜುಲೈ 28ರಂದು ಕೃಷ್ಣೇಂದ್ರ ಸಮರ್ಥ್ ಗಾಯನ
ಪ್ರಸ್ತುತ ಜಸ್ಟಿನ್ ಲ್ಯಾಂಗರ್ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿದ್ದು, ಲ್ಯಾನ್ಸ್ ಕ್ಲೂಸೆನರ್ ಸಹಾಯಕ ಕೋಚ್ ಆಗಿದ್ದಾರೆ. ಮೋರ್ನೆ ಮೊರ್ಕೆಲ್ ಬೌಲಿಂಗ್ ವಿಭಾಗವನ್ನು ನೋಡಿಕೊಳ್ಳುತ್ತಿದ್ದರೆ, ಜಾಂಟಿ ರೋಡ್ಸ್ ಮೂರು ವರ್ಷದಿಂದ ಫ್ರಾಂಚೈಸಿಯ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ನಮ್ಮ ತಂಡಕ್ಕೆ ಹೊಸ ಕೋಚ್ ಆಗಿ ನೀವು ಸೇರಿಕೊಳ್ಳಿ ಎಂದು ಮಾಜಿ ಹಿರಿಯ ಕ್ರಿಕೆಟಿಗ ವಿವಿಎಸ್ ಲಕ್ಷಣ್ ಅವರನ್ನು ಎಲ್ಎಸ್ಜಿ ಮ್ಯಾನೇಜ್ಮೆಂಟ್ ಕೇಳಿಕೊಂಡಿದೆ. ಈ ಮೂಲಕ ಲಕ್ಷಣ್ರನ್ನು ಮತ್ತೊಮ್ಮೆ ಐಪಿಎಲ್ಗೆ ಕರೆತರುವ ಕೆಲಸ ತೆರೆಮರೆಯಲ್ಲಿ ನಡೆಯುತ್ತಿದೆ.
ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರು ಭಾರತೀಯ ಕ್ರಿಕೆಟ್ ಮಂಡಳಿಯೊಂದಿಗಿನ ಒಪ್ಪಂದವನ್ನು ವಿಸ್ತರಿಸುವ ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಈ ಬೆನ್ನಲ್ಲೇ ಅವರನ್ನು ತಮ್ಮ ಫ್ರಾಂಚೈಸಿಗೆ ಕೋಚ್ ಆಗಿ ನೇಮಕ ಮಾಡಿಕೊಳ್ಳುವ ಬಯಕೆಯನ್ನು ಲಖನೌ ಸೂಪರ್ ಜೈಂಟ್ಸ್ ಮ್ಯಾನೇಜ್ಮೆಂಟ್ ವ್ಯಕ್ತಪಡಿಸಿದೆ. ಕೆಲವು ವರ್ಷಗಳ ಹಿಂದೆ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮೆಂಟರ್ ಆಗಿದ್ದ ಲಕ್ಷಣ್ರವರು ಇದೀಗ ಎನ್ಸಿಎ ಜತೆಗಿನ ಒಪ್ಪಂದ ವಿಸ್ತರಿಸಿಕೊಳ್ಳುವುದು ಬಹುತೇಕ ಅನುಮಾನ ಎನ್ನಲಾಗಿದ್ದು, ಇದೇ ಸಪ್ಟೆಂಬರ್ಗೆ ಅವರ ಅವಧಿ ಮುಕ್ತಾಯಗೊಳ್ಳಲಿದೆ,(ಏಜೆನ್ಸೀಸ್).