

ನವದೆಹಲಿ: ಪ್ರಸಕ್ತ ನಡೆಯುತ್ತಿರುವ ದುಲೀಪ್ ಟ್ರೋಫಿಯ ಡಿ ತಂಡದ ಕ್ಯಾಪ್ಟನ್ ಆಗಿರುವ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್, ನಿನ್ನೆ ನಡೆದ ಭಾರತ ಎ ಮತ್ತು ಡಿ ನಡುವಿನ ಪಂದ್ಯದಲ್ಲಿ ತಂಡದ ಪರ ನೀಡಿದ ಬ್ಯಾಟಿಂಗ್ ವೈಖರಿಗೆ ಸದ್ಯ ವ್ಯಾಪಕ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಮ್ಯಾಚ್ನಲ್ಲಿ ಬ್ಯಾಟಿಂಗ್ಗೆಂದು ಕ್ರೀಸ್ಗೆ ಬಂದ ಅಯ್ಯರ್, ಹೆಚ್ಚು ಕಾಲ ನಿಂತು ಟೀಮ್ಗೆ ಆಸರೆಯಾಗಲಿದ್ದಾರೆ ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಕಾಡಿದ್ದು ಅತೀವ ಬೇಸರ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡದ ಪರ ಬ್ಯಾಟಿಂಗ್ ಮಾಡಿದ ಶಮ್ಸ್ ಮುಲಾನಿ 187 ಎಸೆತಗಳಲ್ಲಿ 89 ರನ್ ಗಳಿಸಿದರೆ, ಟೈಲೆಂಡರ್ ತನುಷ್ ಕೋಟ್ಯಾನ್ ಆಕರ್ಷಕ ಅರ್ಧಶತಕ ಸಿಡಿಸಿದ್ದರಿಂದ ಭಾರತ ಎ ಟೀಮ್ 2ನೇ ದಿನದ ಅಂತ್ಯಕ್ಕೆ 290 ರನ್‌ಗೆ ಆಲೌಟ್ ಆಯಿತು. ಇನ್ನು ಈ ವೇಳೆ ಗುರಿಯನ್ನು ಬೆನ್ನಟ್ಟಲು ಕ್ರೀಸ್ಗೆ ಸನ್ಗ್ಲಾಸ್ ಧರಿಸಿ, ಸಖತ್ ಸೈಲಿಶ್ ಆಗಿ ಎಂಟ್ರಿ ಕೊಟ್ಟ ಶ್ರೇಯಸ್ ಅಯ್ಯರ್, ಖಲೀಲ್ ಅಹ್ಮದ್ ಬೌಲಿಂಗ್ಗೆ ಡಕ್ ಔಟ್ ಆಗುವ ಮೂಲಕ ಇದೀಗ ಭಾರೀ ಮುಖಭಂಗಕ್ಕೆ ಗುರಿಯಾಗಿದ್ದಾರೆ.
ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದೇನೋ ಓಕೆ, ಆದ್ರೆ, ಬ್ಯಾಟಿಂಗ್ ಪ್ರದರ್ಶನ ಏಕೆ ಇಷ್ಟೊಂದು ಕಳಪೆ? ಅದು ಡಕ್ ಔಟ್? ನಿಮ್ಮ ಸ್ಟೈಲಿಶ್ ಲುಕ್ಗೆ 10ಕ್ಕೆ 10 ಕೊಟ್ಟರೆ, ರನ್‌ಗೆ ಶೂನ್ಯ ಕೊಡಬಹುದು ಎಂದು ನೆಟ್ಟಿಗರು ಟೀಕಿಸಿದ್ದಾರೆ. ರನ್ಗಳು ಅಗತ್ಯವಿದ್ದಾಗ ಈ ರೀತಿ ಶೋಕಿ ನಿಮ್ಮ ಆಟದ ವೈಖರಿಗೆ ಸರಿ ಹೊಂದಲ್ಲ ಎಂದು ಕೆಲವರು ಜಾಲತಾಣಗಳಲ್ಲಿ ಶ್ರೇಯಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ,(ಏಜೆನ್ಸೀಸ್).