ಡ್ರೀಮ್​11-ಐಪಿಎಲ್​ ಒಪ್ಪಂದಕ್ಕೂ ಕಾಲೆಳೆದ ನೆಟ್ಟಿಗರು

ipl dream11 new
Published on

ಬೆಂಗಳೂರು: ಚೀನಾ ಮೂಲದ ಮೊಬೈಲ್​ ಕಂಪನಿ ಕೊನೇಕ್ಷಣದಲ್ಲಿ ಹಿಂದೆ ಸರಿದ ಬಳಿಕ ಕೊನೆಗೂ ಬಿಸಿಸಿಐ, ಐಪಿಎಲ್​ 13ನೇ ಆವೃತ್ತಿಗೆ ಹೊಸ ಶೀರ್ಷಿಕೆ ಪ್ರಾಯೋಜಕರನ್ನು ಕಂಡುಕೊಳ್ಳುವಲ್ಲಿ ಸಫಲವಾಗಿದೆ. ಈ ಹಿಂದೆ ಪತಂಜಲಿ, ಜಿಯೋ ಕಂಪನಿಗಳು ಐಪಿಎಲ್​ ಪ್ರಾಯೋಜಕತ್ವಕ್ಕೆ ಆಸಕ್ತಿ ತೋರಿದಾಗ ಟ್ರೋಲ್​ ಮಾಡಿದ್ದ ನೆಟ್ಟಿಗರು ಇದೀಗ ಡ್ರೀಮ್​11ಗೆ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವ ಒಲಿದಿರುವುದಕ್ಕೂ ಭರ್ಜರಿ ಕಾಲೆಳೆದಿದ್ದಾರೆ.

ಡ್ರೀಮ್​11 ನಿರೀಕ್ಷೆಗಿಂತ ಕಡಿಮೆ ಎನಿಸಿದ 222 ಕೋಟಿ ರೂ. ಮೊತ್ತಕ್ಕೆ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವ ಒಲಿಸಿಕೊಂಡ ಬೆನ್ನಲ್ಲೇ ಟ್ವಿಟರ್​ನಲ್ಲಿ 'ಡ್ರೀಮ್​11ಐಪಿಎಲ್​' ಹ್ಯಾಷ್​ಟ್ಯಾಗ್​ ಭರ್ಜರಿ ಟ್ರೆಂಡಿಂಗ್​ನಲ್ಲಿ ಕಾಣಿಸಿದ್ದು, ನೆಟ್ಟಿಗರು ವಿವಿಧ ಮೀಮ್ಸ್​ಗಳ ಮೂಲಕ ನಗು ಮೂಡಿಸಿದ್ದಾರೆ.

ವಿಶ್ವದ ಅತ್ಯಂತ ವೇಗದ ಓಟಗಾರ ಉಸೇನ್​ ಬೋಲ್ಟ್​ ರೀತಿಯಲ್ಲಿ ಡ್ರೀಮ್​11 ರೇಸ್​ನಲ್ಲಿದ್ದ ಇತರ ಕಂಪನಿಗಳನ್ನು ಹಿಂದಿಕ್ಕಿ ಐಪಿಎಲ್​ ಶೀರ್ಷಿಕೆ ಪ್ರಾಯೋಜಕತ್ವ ಬಾಚಿಕೊಂಡಿತು ಎಂಬ ರೀತಿಯಲ್ಲೂ ಟ್ರೋಲ್​ ಮಾಡಲಾಗಿದೆ. ಡ್ರೀಮ್​11ಗೆ ಟೈಟಲ್​ ಸ್ಪಾನ್ಸರ್​ಶಿಪ್​ ಒಲಿದ ಬಳಿಕ ಪತಂಜಲಿ, ಜಿಯೋ ಸಹಿತ ಇತರ ಕಂಪನಿಗಳು ಯಾವ ರೀತಿಯಲ್ಲಿ ನಿರಾಸೆ ಎದುರಿಸುತ್ತಿರಬಹುದು ಎಂಬುದನ್ನು ವಿವಿಧ ಮೀಮ್ಸ್​ಗಳ ಮೂಲಕ ತೋರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net