ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿ, ಕರ್ನಾಟಕ ತಂಡಕ್ಕೆ ಸತತ 2ನೇ ಜಯ

blind cricket for web R. Sunil
Published on

ಬೆಂಗಳೂರು : ಆರ್.ಸುನೀಲ್ ಪ್ರಕಾಶ್ (119 ರನ್, 44 ಎಸೆತ, 25 ಬೌಂಡರಿ) ಹಾಗೂ ಜಯರಾಮಯ್ಯ (74 ರನ್) ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ 3ನೇ ಇಂಟರ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿತು. ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ ಚಂದಾಪುರ ಸಮೀಪದ ರಾಮಸಾಗರದ ಸಚಿನ್ ತೆಂಡುಲ್ಕರ್ ಟರ್ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡ 114 ರನ್‌ಗಳಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 3 ವಿಕೆಟ್‌ಗೆ 248 ರನ್‌ಗಳಿಸಿದರೆ, ಪ್ರತಿಯಾಗಿ ಉತ್ತರಪ್ರದೇಶ ತಂಡ 7 ವಿಕೆಟ್‌ಗೆ 134 ರನ್‌ಗಳಿಸಲಷ್ಟೇ ಶಕ್ತವಾಯಿತು. ಉಳಿದ ಪಂದ್ಯಗಳಲ್ಲಿ ಆಂಧ್ರಪ್ರದೇಶ, ತಮಿಳುನಾಡು, ರಾಜಸ್ತಾನ, ತೆಲಂಗಾಣ, ಕೇರಳ, ಹರಿಯಾಣ ತಂಡಗಳು ಜಯ ದಾಖಲಿಸಿದವು.

ಕರ್ನಾಟಕ ತಂಡ: 3 ವಿಕೆಟ್‌ಗೆ 248 (ಆರ್.ಸುನೀಲ್ ಪ್ರಕಾಶ್ 119, ಜಯರಾಮಯ್ಯ 74), ಉತ್ತರ ಪ್ರದೇಶ: 7 ವಿಕೆಟ್‌ಗೆ 134 (ಬಾಲಮುಕುಂದ ಚತುರ್ವೇದಿ 58).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net