More

    ಇಂಗ್ಲೆಂಡ್ ಎದುರು ಹೀನಾಯ ಸೋಲು ಕಂಡ ಭಾರತ ತಂಡ

    ಚೆನ್ನೈ: ನಾಯಕ ವಿರಾಟ್ ಕೊಹ್ಲಿ (72ರನ್, 104 ಎಸೆತ, 9 ಬೌಂಡರಿ) ಹಾಗೂ ಶುಭಮಾನ್ ಗಿಲ್ (50ರನ್, 83 ಎಸೆತ, 7 ಬೌಂಡರಿ, 1 ಸಿಕ್ಸರ್) ಜೋಡಿಯ ಪ್ರತಿಹೋರಾಟದ ನಡುವೆಯೂ ಪ್ರವಾಸಿ ಇಂಗ್ಲೆಂಡ್ ಬೌಲಿಂಗ್ ಬಲೆಗೆ ಬಿದ್ದ ಭಾರತ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 227 ರನ್‌ಗಳಿಂದ ಸೋಲಿಗೆ ಶರಣಾಯಿತು. ಇದರಿಂದ 4 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 0-1 ರಿಂದ ಹಿನ್ನಡೆ ಅನುಭವಿಸಿತು. ಕಳೆದ ತಿಂಗಳು ಆಸ್ಟ್ರೇಲಿಯಾ ನೆಲದಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಗಮನಸೆಳೆದಿದ್ದ ಭಾರತ ತಂಡ ತವರಿನಲ್ಲಿ ಮೊದಲ ಪಂದ್ಯದಲ್ಲಿಯೇ ನಿರಾಸೆ ಅನುಭವಿಸಿತು.

    ಇದನ್ನೂ ಓದಿ: 300 ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವಿಕೆಟ್ ಗಳ ಸರದಾರ ಇಶಾಂತ್ ಶರ್ಮ, 

    ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 420 ರನ್ ಗೆಲುವಿನ ಗುರಿಗೆ 1 ವಿಕೆಟ್‌ಗೆ 39 ರನ್‌ಗಳಿಂದ ದಿನದಾಟ ಆರಂಭಿಸಿದ ಭಾರತ ತಂಡ 58.1 ಓವರ್‌ಗಳಲ್ಲಿ 192 ರನ್‌ಗಳಿಗೆ ಸರ್ವಪತನ ಕಂಡಿತು. ಭೋಜನ ವಿರಾಮದ ಬಳಿಕ ಕೆಲ ಸಮಯದಲ್ಲೇ ಇಂಗ್ಲೆಂಡ್ ಎದುರು ಮಂಡಿಯೂರಿತು. ಅಜಿಂಕ್ಯ ರಹಾನೆ (0) ಎರಡನೇ ಇನಿಂಗ್ಸ್‌ನಲ್ಲೂ ವಿಲರಾದರೆ, ಮೊದಲ ಇನಿಂಗ್ಸ್‌ನಲ್ಲಿ ತಂಡಕ್ಕೆ ನೆರವಾಗಿದ್ದ ಚೇತೇಶ್ವರ್ ಪೂಜಾರ (15), ರಿಷಭ್ ಪಂತ್ (11) ಜೋಡಿ ನಿರಾಸೆ ಅನುಭವಿಸಿತು. ಕೆಳಕ್ರಮಾಂಕ ದಿಢೀರ್ ಕುಸಿತ ಕಂಡಿತು. ಇಂಗ್ಲೆಂಡ್ ಪರ ಜಾಕ್ ಲೀಚ್ 4 ವಿಕೆಟ್ ಕಬಳಿಸಿದರೆ, ಜೇಮ್ಸ್ ಆಂಡರ್‌ಸನ್ 3 ವಿಕೆಟ್ ಪಡೆದರು. ಎರಡನೇ ಟೆಸ್ಟ್ ಪಂದ್ಯ ಫೆ.13 ರಿಂದ ಚೆನ್ನೈನಲ್ಲೆ ನಡೆಯಲಿದೆ.

    ಇಂಗ್ಲೆಂಡ್ ಮೊದಲ ಇನಿಂಗ್ಸ್ 578 ರನ್‌ಗಳಿಸಿದರೆ, ಭಾರತ 337 ರನ್‌ಗಳಿಗೆ ಸರ್ವಪತನ ಕಂಡಿತ್ತು. ಇದರಿಂದ 241 ರನ್ ಮುನ್ನಡೆ ಸಾಧಿಸಿದ್ದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 178 ರನ್ ಗಳಿಸಿತ್ತು. ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದ ಜೋ ರೂಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಎರಡನೇ ಟೆಸ್ಟ್ ಪಂದ್ಯ ಫೆಬ್ರವರಿ.13 ರಿಂದ ಚೆನ್ನೈನಲ್ಲೆ ನಡೆಯಲಿದೆ.

    ಇದನ್ನೂ ಓದಿ: ಲೂಸಿಫರ್ ರಿಮೇಕ್ ನಲ್ಲಿ ತ್ರಿಷಾ ಕೃಷ್ಣನ್..!

    ಇಂಗ್ಲೆಂಡ್: 578 ಮತ್ತು 178, ಭಾರತ: 337 ಮತ್ತು 58.1 ಓವರ್‌ಗಳಲ್ಲಿ 192 (ವಿರಾಟ್ ಕೊಹ್ಲಿ 72, ಶುಭಮಾನ್ ಗಿಲ್ 50, ಪೂಜಾರ 15, ಜಾಕ್ ಲೀಚ್ 76ಕ್ಕೆ 4, ಜೇಮ್ಸ್ ಆಂಡರ್‌ಸನ್ 17ಕ್ಕೆ 3, ಜ್ರೋಾ ಆರ್ಚರ್ 23ಕ್ಕೆ 1, ಡೊಮಿನಿಕ್ ಬೆಸ್ 50ಕ್ಕೆ 1, ಬೆನ್ ಸ್ಟೋಕ್ಸ್ 13ಕ್ಕೆ 1).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts