ಲೂಸಿಫರ್ ರಿಮೇಕ್​ನಲ್ಲಿ ತ್ರಿಷಾ ಕೃಷ್ಣನ್

Thrisha
Published on

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಆಚಾರ್ಯ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಅದರ ಜತೆಗೆ ಮಲಯಾಳಂನ ‘ಲೂಸಿಫರ್’ ಚಿತ್ರದ ರಿಮೇಕ್ ಸಿದ್ಧತೆಗಳೂ ನಡೆಯುತ್ತಿವೆ. ಈ ಚಿತ್ರದಲ್ಲಿ ನಾಯಕಿಯಾಗಿ ತ್ರಿಷಾ ಕೃಷ್ಣನ್ ನಟಿಸಲಿದ್ದಾರಂತೆ.

ಹೌದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಕೊರಟಾಲ ಶಿವ ನಿರ್ದೇಶನದ ‘ಆಚಾರ್ಯ’ ಚಿತ್ರದಲ್ಲಿಯೇ ತ್ರಿಷಾ, ಚಿರಂಜೀವಿಗೆ ನಾಯಕಿಯಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಈಡೇರಲಿಲ್ಲ. ಆಗ ತ್ರಿಷಾ ಜಾಗಕ್ಕೆ ಕಾಜಲ್ ಅಗರ್​ವಾಲ್ ಎಂಟ್ರಿಕೊಟ್ಟಿದ್ದರು. ಈಗ ‘ಲೂಸಿಫರ್’ ತೆಲುಗು ರಿಮೇಕ್​ನಲ್ಲಿ ಚೆನ್ನೈ ಚೆಲುವೆಯನ್ನು ಕರೆತರುವ ಮಾತುಗಳು ಕೇಳಿಬಂದಿವೆ.

ಈ ಹಿಂದೆ ಅಂದರೆ 2006ರಲ್ಲಿ ಎ.ಆರ್ ಮುರುಗದಾಸ್ ನಿರ್ದೇಶನದ ‘ಸ್ಟಾಲಿನ್’ ಚಿತ್ರದಲ್ಲಿ ಚಿರಂಜೀವಿ ಮತ್ತು ತ್ರಿಷಾ ಒಟ್ಟಿಗೆ ನಟಿಸಿದ್ದರು. ಅದಾದ ಬಳಿಕ ಇಂದಿನವರೆಗೂ ಈ ಜೋಡಿ ತೆರೆ ಮೇಲೆ ಕಾಣಿಸಿಕೊಂಡಿಲ್ಲ. ಹಾಗಾಗಿ ಒಂದು ವೇಳೆ ‘ಲೂಸಿಫರ್’ ರಿಮೇಕ್​ನಲ್ಲಿ ನಟಿಸಿದ್ದೇ ಹೌದಾದರೆ, ಬರೋಬ್ಬರಿ 15 ವರ್ಷದ ಬಳಿಕ ಈ ಕಲಾವಿದರು ಮತ್ತೆ ಒಂದಾಗಲಿದ್ದಾರೆ. ಅಂದಹಾಗೆ, ಮೋಹನ್ ರಾಜಾ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net