More

    300 ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ವಿಕೆಟ್ ಗಳ ಸರದಾರ ಇಶಾಂತ್ ಶರ್ಮ

    ಚೆನ್ನೈ: ಇಶಾಂತ್ ಶರ್ಮ ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಕಬಳಿಸಿದ ಭಾರತದ 6ನೇ ಬೌಲರ್ ಮತ್ತು 3ನೇ ವೇಗಿ ಎನಿಸಿಕೊಂಡರು. ಡಾನ್ ಲಾರೆನ್ಸ್ ವಿಕೆಟ್ ಕಬಳಿಸುವ ಮೂಲಕ ಇಶಾಂತ್ ಶರ್ಮ ಈ ಸಾಧನೆ ಮಾಡಿದರು. ಕಪಿಲ್ ದೇವ್ (434) ಹಾಗೂ ಜಹೀರ್ ಖಾನ್ (311) ಈ ಸಾಧನೆ ಮಾಡಿದ್ದ ವೇಗಿಗಳು ಮತ್ತು ಅನಿಲ್ ಕುಂಬ್ಳೆ (619), ಅರ್.ಅಶ್ವಿನ್ (383), ಹರ್ಭಜನ್ ಸಿಂಗ್ (417) ಸ್ಪಿನ್ನರ್‌ಗಳು. 32 ವರ್ಷದ ಇಶಾಂತ್ 98ನೇ ಪಂದ್ಯದಲ್ಲಿ 300 ವಿಕೆಟ್‌ಗಳ ಒಡೆಯನಾದರು. ಭಾರತದ ಇತರ ಬೌಲರ್‌ಗಳಿಗೆ ಹೋಲಿಸಿದರೆ 300 ವಿಕೆಟ್ ಪಡೆಯಲು ಅತಿಹೆಚ್ಚು ಪಂದ್ಯಗಳನ್ನಾಡಿದ ಬೌಲರ್ ಎನಿಸಿದ್ದಾರೆ.

    ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಎದುರು 2-0 ಯಿಂದ ಟೆಸ್ಟ್ ಸರಣಿ ವಶಪಡಿಸಿಕೊಂಡ ಪಾಕಿಸ್ತಾನ

    13 ವರ್ಷಗಳಿಂದ ಟೀಮ್ ಇಂಡಿಯಾದಲ್ಲಿರುವ ಇಶಾಂತ್, 11 ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಅಶ್ವಿನ್ 54 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರೆ, ನಂತರದ ಸ್ಥಾನದಲ್ಲಿ ಅನಿಲ್ ಕುಂಬ್ಳೆ (66), ಹರ್ಭಜನ್ ಸಿಂಗ್ (72), ಕಪಿಲ್ ದೇವ್ (83) ಹಾಗೂ ಜಹೀರ್ ಖಾನ್ (89) ಇದ್ದಾರೆ. ಇಶಾಂತ್ ಶರ್ಮ 2007ರಲ್ಲಿ ಬಾಂಗ್ಲಾದೇಶ ಎದುರು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಕಳೆದ ಆಸ್ಟ್ರೇಲಿಯಾ ಪ್ರವಾಸದಿಂದ ಹಿಂದೆ ಸರಿದಿದ್ದರು. ಇಶಾಂತ್ 300 ವಿಕೆಟ್ ಗಡಿ ದಾಟುತ್ತಿದ್ದಂತೆ ಐಸಿಸಿ ಅಭಿನಂದನೆ ಸಲ್ಲಿಸಿತು.

    ಇದನ್ನೂ ಓದಿ: ಭಾರತದ ರಿಷಭ್ ಪಂತ್‌ಗೆ ಜನವರಿ ತಿಂಗಳ ಐಸಿಸಿ ಆಟಗಾರ ಪ್ರಶಸ್ತಿ

    ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 420 ರನ್ ಬೃಹತ್ ಸವಾಲು ನೀಡಿದೆ. ಚೆನ್ನೈನ ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬೃಹತ್ ಸವಾಲು ಬೆನ್ನಟ್ಟಿರುವ ಭಾರತ ತಂಡ, 1 ವಿಕೆಟ್‌ಗೆ 39 ರನ್ ಪೇರಿಸಿದ್ದು, ಅಂತಿಮ ದಿನದಾಟದಲ್ಲಿ ಜಯ ದಾಖಲಿಸಲು 381 ರನ್ ಗಳಿಸಬೇಕಿದೆ. ಇದಕ್ಕೂ ಮೊದಲು ಆರ್.ಅಶ್ವಿನ್ (61ಕ್ಕೆ 6) ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 178 ರನ್‌ಗಳಿಗೆ ಸರ್ವಪತನ ಕಂಡಿತ್ತು. ಭಾರತ 6 ವಿಕೆಟ್ 257 ರನ್‌ಗಳಿಂದ ದಿನದಾಟ ಆರಂಭಿಸಿದ್ದ ಭಾರತ 337 ರನ್‌ಗಳಿಗೆ ಆಲೌಟ್ ಆಯಿತು. ಪ್ರವಾಸಿ ಇಂಗ್ಲೆಂಡ್ ಫಾಲೋಆನ್ ಹೇರದೆ ಎರಡನೇ ಸರದಿ ಬ್ಯಾಟಿಂಗ್ ಆರಂಭಿಸಿತು. ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 578 ರನ್ ಕಲೆಹಾಕಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts