

ಬ್ರಿಸ್ಬೇನ್: ಸ್ಪೇನ್ ತಾರೆ ರಾಫೆಲ್ ನಡಾಲ್ ಸರಿಸುಮಾರು ಒಂದು ವರ್ಷದ ಬಳಿಕ ವೃತ್ತಿಪರ ಟೆನಿಸ್ ಪಂದ್ಯವಾಡಿದ್ದು, ಗೆಲುವಿನೊಂದಿಗೆ ಯಶಸ್ವಿ ಪುನರಾಗಮನ ಕಂಡಿದ್ದಾರೆ.
ಬ್ರಿಸ್ಬೇನ್ ಇಂಟರ್ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ನಡಾಲ್ ಮಂಗಳವಾರ ಡೊಮಿನಿಕ್ ಥೀಮ್ ವಿರುದ್ಧ ಆಡಿದ ಮೊದಲ ಸುತ್ತಿನ ಪಂದ್ಯದಲ್ಲಿ 7-6, 6-1 ನೇರಸೆಟ್ಗಳಿಂದ ಗೆದ್ದರು. ಕಳೆದ ವರ್ಷ ಜನವರಿಯಲ್ಲಿ ಆಸ್ಟ್ರೆಲಿಯನ್ ಓಪನ್ನಲ್ಲಿ ಕೊನೆಯದಾಗಿ ಆಡಿದ್ದ ನಡಾಲ್ ಅಲ್ಲಿ 2ನೇ ಸುತ್ತಿನಲ್ಲೇ ಹೊರಬಿದ್ದಿದ್ದರು. ಬಳಿಕ ಗಾಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 37 ವರ್ಷದ ನಡಾಲ್ ಇದೀಗ 349 ದಿನಗಳ ಬಳಿಕ ಮರಳಿ ಕಣಕ್ಕಿಳಿದಿದ್ದಾರೆ.
22 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡೆಯ ಹಾಗೂ ಮಾಜಿ ವಿಶ್ವ ನಂ. 1 ನಡಾಲ್ ಈಗ ವಿಶ್ವ ರ್ಯಾಂಕಿಂಗ್ನಲ್ಲಿ 672ನೇ ಸ್ಥಾನಕ್ಕೆ ಕುಸಿದಿದ್ದಾರೆ.