ಬ್ರೆಜಿಲ್​ನಲ್ಲಿ ಫುಟ್​ಬಾಲ್​ ದಿಗ್ಗಜ ಪೀಲೆಗೆ ವಿಶೇಷ ಗೌರವ

pele web
Published on

ರಿಯೋ ಡಿ ಜನೈರೋ: ಬ್ರೆಜಿಲ್ ಫುಟ್​ಬಾಲ್​ ದಿಗ್ಗಜ ಪೀಲೆ ಕಣ್ಮರೆಯಾಗಿ ಶುಕ್ರವಾರಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಿಯೋ ಡಿ ಜನೈರೋದಲ್ಲಿ ಅವರಿಗೆ ವಿಶೇಷವಾದ ಗೌರವವನ್ನು ಸಲ್ಲಿಸಲಾಯಿತು.

ಬ್ರೆಜಿಲ್​ನ ಜಗದ್ವಿಖ್ಯಾತ ಬೃಹತ್​ ಜೀಸಸ್​ ಕ್ರೈಸ್ಟ್​ ಪ್ರತಿಮೆಗೆ (ಕ್ರೈಸ್ಟ್​ ದಿ ರಿಡೀಮರ್​) ಪ್ರೊಜೆಕ್ಷನ್​ ಮೂಲಕ ಪೀಲೆ ಅವರ 10 ನಂಬರ್​ ಜೆರ್ಸಿ ತೊಡಿಸಲಾಯಿತು.

ಇದೇ ವೇಳೆ ಬ್ರೆಜಿಲ್​ ನಿಂಟಿನಲ್ಲಿ ಅಸಾಧಾರಣ, ಹೋಲಿಸಲಾಗದ ಮತ್ತು ಅನನ್ಯ ಪದಗಳಿಗೆ ವಿಶೇಷಣವಾಗಿ "ಪೀಲೆ' ಪದವನ್ನೂ ಸೇರಿಸಲಾಗಿದೆ. ಬ್ರೆಜಿಲ್​ ಪರ 1958, 1962, 1970ರ ಫಿಫಾ ವಿಶ್ವಕಪ್​ ಗೆದ್ದಿದ್ದ ಪೀಲೆ, 2022ರ ಡಿಸೆಂಬರ್​ 29ರಂದು 82ನೇ ವಯಸ್ಸಿನಲ್ಲಿ ಕರುಳಿನ ಕ್ಯಾನ್ಸರ್​ನಿಂದ ಮೃತಪಟ್ಟಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net