ಅಪ್ಪ ಸ್ಪಿನ್ನರ್, ಮಗ ಸಿಂಗರ್

Mushtaq Ahmed
Pakistan's former test spinner Mushtaq Ahmed, laughs as he talks to reporters following a training session at the National Cricket Academy in Lahore, Pakistan, Wednesday, April 5, 2017. Ahmed believes young sensation Shadab Khan could play alongside Yasir Shah and form a lethal leg-spin pair for Pakistan. (AP Photo/K.M. Chaudary)
Published on

ಕರಾಚಿ: ಅಪ್ಪ-ಅಮ್ಮಂದಿರ ವೃತ್ತಿಜೀವನವನ್ನೇ ಮಕ್ಕಳು ಆಯ್ದುಕೊಳ್ಳುವುದು ತೀರಾ ವಿರಳ. ಕ್ರೀಡಾ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ಮುಷ್ತಾಕ್ ಅಹಮದ್, ತಮ್ಮ ಕರಾರುವಾಕ್ ಬೌಲಿಂಗ್‌ನಿಂದ ಹೆಸರಾಗಿದ್ದರು. ಅಲ್ಲದೆ, ಯುವ ಪೀಳಿಗೆಗೆ ಉತ್ತಮ ಕೋಚ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಮುಷ್ತಾಕ್ ಅವರ ಮಗ ತಂದೆಯಂತೆ ಕ್ರೀಡಾಪಟುವಾಗದೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿದ್ದಾರೆ. ಮುಷ್ತಾಕ್ ಅಹಮದ್ ಪುತ್ರ ಬಜಾಲ್ ಈಗಾಗಲೇ ಮೊದಲ ಅಲ್ಪಮ್ ಬಿಡುಗಡೆ ಮಾಡಿದ್ದು, ಶೀಘ್ರವೇ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಿದ್ದಾರೆ.

ಪಾಕ್ ಯುವ ಕ್ರಿಕೆಟಿಗರಿಗೆ ಮುಷ್ತಾಕ್ ಅಹಮದ್ ಮಾದರಿಯಾಗಿ ನಿಲ್ಲುತ್ತಾರೆ. ಸ್ಪಿನ್ ಬೌಲಿಂಗ್ ಕೋಚ್ ಆಗಿ ಪಾಕ್ ಸೇರಿದಂತೆ ಹಲವು ತಂಡಗಳೊಂದಿಗೆ ಕಾರ್ಯನಿರ್ವಹಿಸಿದ್ದಾರೆ. ಆದರೆ, ಮುಷ್ತಾಕ್ ಅವರ ಮಗನಿಗೆ ಮಾತ್ರ ಕ್ರಿಕೆಟ್ ಮೇಲೆ ಕಿಂಚಿತ್ತು ಆಸಕ್ತಿ ಇರಲಿಲ್ಲ. ಇದನ್ನು ಗಮನಿಸಿದ ಮುಷ್ತಾಕ್, ಆತನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲು ಅವನಿಗೆ ಸಂಪೂರ್ಣ ಸ್ವತಂತ್ರ ನೀಡಿದರಂತೆ. ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ ಪರವಾಗಿಲ್ಲ, ಭ್ರಷ್ಟನಾಗಬೇಡ, ಯಾವುದೇ ಕಾರಣಕ್ಕೂ ವಿವಾದಗಳಿಗೆ ಸಿಲುಕಬೇಡ ಎಂಬುದೇ ಮಗನಿಗೆ ಅವರು ಮಾಡುವ ಪಾಠವಂತೆ. ನಿನ್ನ ವೃತ್ತಿಯನ್ನು ಗೌರವಿಸು, ಪ್ರೀತಿಸು ಎನ್ನುತ್ತಾರೆ 1992 ಏಕದಿನ ವಿಶ್ವಕಪ್ ವಿಜೇತ ಪಾಕ್ ತಂಡದ ಸದಸ್ಯರೂ ಆಗಿರುವ ಮುಷ್ತಾಕ್ ಅಹಮದ್. ಬಜಾಲ್ ಆಲ್ಬಂಗೆ ಸಾಮಾಜಿಕ ಜಾಲತಾಣಗಳ ಮೂಲಕ ಪಾಕ್ ಆಟಗಾರರೂ ಪ್ರಚಾರ ನೀಡಿದ್ದಾರೆ.

ಲಾಹೋರ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ಸಂಸ್ಥೆಯ (ಪಿಸಿಬಿ) ಹೈ ರ್ಪಾಮೆನ್ಸ್ ಕೇಂದ್ರದ ನಿರ್ದೇಶಕರೂ ಆಗಿರುವ ಮುಷ್ತಾಕ್, ಪಾಕ್ ಪರ 52 ಟೆಸ್ಟ್ ಹಾಗೂ 144 ಏಕದಿನ ಪಂದ್ಯಗಳನ್ನಾಡಿದ್ದಾರೆ. ಜತೆಗೆ ಹಲವು ತಂಡಗಳಿಗೆ ಸ್ಪಿನ್ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂಜಮಾಮ್ ಉಲ್ ಹಕ್, ಮೊಹಮದ್ ಯೂಸ್ು, ಸಯೀದ್ ಅನ್ವರ್, ವಾಸೀಂ ಅಕ್ರಮ್‌ರಂಥ ಸ್ಟಾರ್ ಆಟಗಾರರೊಂದಿಗೆ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು. ಸಂಗೀತ ಕ್ಷೇತ್ರದಲ್ಲಿ ಮಗ ದೊಡ್ಡ ಸಾಧನೆ ಮಾಡಬೇಕು ಎಂಬುದೇ ಅಪ್ಪನ ಆಶಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net