ಕ್ಯಾಪ್ಟನ್​ ಕೂಲ್​ ರಾತ್ರಿ ನಿದ್ದೆಯಲ್ಲಿ ಕನವರಿಸುವುದು ಕ್ರಿಕೆಟ್​ ಅಲ್ಲ, ಇದನ್ನಂತೆ!

dhoni pubg
Published on

ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಕ್ರಿಕೆಟ್​ನೊಂದಿಗೆ ಭಾವುಕ ಸಂಬಂಧ ಹೊಂದಿದ್ದಾರೆ. ಹಾಗಾಗಿ ಅವರು ನಿದ್ದೆಯಲ್ಲೂ ಕ್ರಿಕೆಟ್​ ಅನ್ನೇ ಕನವರಿಸುತ್ತಾರೆ ಎಂದು ಅವರ ಅಭಿಮಾನಿಗಳೆಲ್ಲ ಭಾವಿಸಿದ್ದಾರೆ.

ಆದರೆ, ಇದು ಶುದ್ಧ ಸುಳ್ಳು ಎಂದು ಕ್ಯಾಪ್ಟನ್​ ಕೂಲ್​ ಅವರ ಪತ್ನಿ ಸಾಕ್ಷಿ ಸ್ಪಷ್ಟಪಡಿಸಿದ್ದಾರೆ. ಹಾಗಾದರೆ ಅವರ ಜೀವಕ್ಕೆ ಜೀವವಾಗಿರುವ ಪುತ್ರಿ ಝೀವಾ ಧೋನಿಯನ್ನೇ...? ಖಂಡಿತ ಅದೂ ಅಲ್ಲವಂತೆ. ಹಾಗಾದರೆ ಮತ್ತೇನು...?

ಪಬ್​ಜಿ! (PUBG) ವಿಡಿಯೋ ಗೇಮ್​ ಎಂದು ಸಾಕ್ಷಿ ಸ್ಪಷ್ಟಪಡಿಸಿದ್ದಾರೆ. ಹೌದು. ಅವರು ಕ್ರಿಕೆಟ್​ ಆಡದಿರುವಾಗ ಪಬ್​ಜಿ ವಿಡಿಯೋ ಗೇಮ್​ ಆಡುತ್ತಾ ಹಗುರಾಗುತ್ತಾರೆ. ಒಂದರ್ಥದಲ್ಲಿ ಈ ಗೇಮ್​ ನಮ್ಮ ಮಲಗುವ ಕೋಣೆ, ಹಾಸಿಗೆಯನ್ನೂ ಆವರಿಸಿಬಿಟ್ಟಿದೆ. ಇತ್ತೀಚೆಗೆ ಇವರು ಕನಸಿನಲ್ಲೂ ಪಬ್​ಜಿ ಅನ್ನು ಕನವರಿಸುತ್ತಿರುತ್ತಾರೆ ಎಂದು ಹುಸಿ ಮಾತ್ಸರ್ಯ ತೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net