ಮುಂಬೈ ಇಂಡಿಯನ್ಸ್​ ತಂಡದೊಳಗೆ ಎರಡು ಬಣ! ಹಾರ್ದಿಕ್​-ರೋಹಿತ್​ ಪರ ಗುಂಪುಗಳಲ್ಲಿ ಆಟಗಾರರ ವಿಭಜನೆ!

web mi web
Published on

ನವದೆಹಲಿ: ರೋಹಿತ್​ ಶರ್ಮ ನಾಯಕತ್ವವನ್ನು ಕಸಿದು ಹಾರ್ದಿಕ್​ ಪಾಂಡ್ಯಗೆ ನೀಡಿದ ಬಳಿಕ ಸಾಕಷ್ಟು ಪರ-ವಿರೋಧದ ಚರ್ಚೆಗೆ ಒಳಗಾಗುತ್ತಲೇ ಬಂದಿರುವ ತಂಡ ಮುಂಬೈ ಇಂಡಿಯನ್ಸ್​. ಇದೀಗ ತಂಡ ಆರಂಭಿಕ 2 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಇದಕ್ಕೆ ತಂಡದಲ್ಲಿನ ಒಡಕು ಪ್ರಮುಖ ಕಾರಣವಾಗಿದೆ ಎಂದು ವರದಿಯಾಗಿದೆ.

ಮುಂಬೈ ತಂಡದಲ್ಲಿ ಹಾರ್ದಿಕ್​-ರೋಹಿತ್​ ಅವರ ಎರಡು ಬಣಗಳಿವೆ. ವಿಕೆಟ್​ ಕೀಪರ್​-ಬ್ಯಾಟರ್​ ಇಶಾನ್​ ಕಿಶನ್​ ಅವರು ಹಾರ್ದಿಕ್​ ಪಾಂಡ್ಯ ಬಣದಲ್ಲಿದ್ದರೆ, ರೋಹಿತ್​ ಅವರ ಗುಂಪಿನಲ್ಲಿ ಜಸ್​ಪ್ರೀತ್​ ಬುಮ್ರಾ, ಸೂರ್ಯಕುಮಾರ್​ ಯಾದವ್​, ತಿಲಕ್​ ವರ್ಮ ಮತ್ತಿತರರು ಇದ್ದಾರೆ ಎಂದು ಹಿಂದಿ ಪತ್ರಿಕೆಯೊಂದರ ವರದಿಯಲ್ಲಿ ತಿಳಿಸಲಾಗಿದೆ.

ಆಟಗಾರರಲ್ಲಿನ ನಿಷ್ಠೆಯಲ್ಲಿರುವ ವಿಭಜನೆಯೇ ತಂಡದ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ. ಹಾರ್ದಿಕ್​ ಪಾಂಡ್ಯ ತಂಡದ ಅಭಿಮಾನಿಗಳಿಂದಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣ ಮಾತ್ರವಲ್ಲದೆ, ಸ್ಟೇಡಿಯಂನಲ್ಲೂ ಹಾರ್ದಿಕ್​ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಆದರೆ ತಂಡದ ಮಾಲೀಕರ ಬೆಂಬಲ ಈಗಲೂ ಹಾರ್ದಿಕ್​ಗೆ ಇದೆ ಎಂದು ವಿವರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net