10ನೇ ವರ್ಷದ ವಿವಾಹ ವಾರ್ಷಿಕೋತ್ಸವದ  ಸಂಭ್ರಮದಲ್ಲಿ ಧೋನಿ ದಂಪತಿ

dhoni marriage
Published on

ನವದೆಹಲಿ: ಎಂಎಸ್​ ಧೋನಿ ಭಾರತೀಯ ಕ್ರಿಕೆಟ್​ ತಂಡ ಶ್ರೇಷ್ಠ ಹಾಗೂ ಅದೃಷ್ಟ ನಾಯಕ. ಕ್ಯಾಪ್ಟನ್​ ಕೂಲ್​ ಎಂದು ಕರೆಸಿಕೊಳ್ಳುತ್ತಿದ್ದ ಧೋನಿ ಒಂದು ವರ್ಷದಿಂದ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಲಾಕ್​ಡೌನ್​ನಿಂದಾಗಿ ಜಾರ್ಖಂಡ್​ ರಾಜಧಾನಿ ರಾಂಚಿಯ ಹೊರವಲಯದಲ್ಲಿರುವ ತಮ್ಮ ಫಾಮ್​ರ್ಹೌಸ್​ನಲ್ಲಿ ಕುಟುಂಬ ಸದಸ್ಯರೊಂದಿಗಿದ್ದಾರೆ. ಕ್ರಿಕೆಟ್​ನಿಂದ ದೂರ ಉಳಿದರೂ ಧೋನಿ ಹೆಸರು ಮಾತ್ರ ಎಂದಿಂಗೂ ಚಾಲ್ತಿಯಲ್ಲಿರುತ್ತದೆ. ಧೋನಿ ಹಾಗೂ ಸಾಕ್ಷಿ ಸಿಂಗ್​ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಇಂದಿಗೆ (ಜುಲೈ 4) 10 ವರ್ಷ ಪೂರೈಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ವಾರ್ಷಿಕೋತ್ಸವದ

ಎಂಎಸ್​ ಧೋನಿ ಜೀವನ ಚರಿತ್ರೆ ಎಂಎಸ್​ ಧೋನಿ, ದ ಅನ್​ಟೋಲ್ಡ್​ ಸ್ಟೋರಿ ಸಿನಿಮಾದಲ್ಲಿ ತೋರಿಸಿದಂತೆ ಧೋನಿ ಮೊದಲ ಬಾರಿಗೆ ಸಾಕ್ಷಿ ಅವರನ್ನು 2007ರಲ್ಲಿ ಕೋಲ್ಕತದ ತಾಜ್​ ಬೆಂಗಾಲ್​ ಹೋಟೆಲ್​ನಲ್ಲಿ ಭೇಟಿಯಾದರು. ಆದರೆ, ನೈಜ್ಯ ಭೇಟಿ ಸಿನಿಮಾಗಿಂತ ಕೊಂಚ ವಿಭಿನ್ನವಾಗಿದೆ. ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಪಂದ್ಯವೊಂದು ಕೋಲ್ಕತದಲ್ಲಿ ಆಯೋಜನೆಗೊಂಡಿದ್ದರಿಂದ ಭಾರತ ತಂಡ ತಾಜ್​ ಹೋಟೆಲ್​ನಲ್ಲಿ ಉಳಿದುಕೊಂಡಿರುತ್ತದೆ. ಈ ವೇಳೆ ಧೋನಿ ಅಂದಿನ ಮ್ಯಾನೇಜರ್​ ಯುಧಾಜಿತ್​ ದತ್​ ಧೋನಿ ನೋಡಲು ಹೋಟೆಲ್​ಗೆ ಆಗಮಿಸುತ್ತಾರೆ. ಅದೇ ಹೋಟೆಲ್​ನಲ್ಲಿ ಇಂರ್ಟನ್​ಷಿಪ್​ ಮಾಡುತ್ತಿದ್ದ ಸಾಕ್ಷಿ ಸಿಂಗ್​, ದತ್​ಗೆ ಪರಿಚಯವಿರುತ್ತದೆ. ಬಳಿಕ ದತ್​ ಧೋನಿ ಅವರನ್ನು ಸಾಕ್ಷಿಗೆ ಪರಿಚಯ ಮಾಡಿಕೊಡುತ್ತಾರೆ. ಬಳಿಕ ದತ್​ ಮೂಲಕ ಧೋನಿ ಸಾಕ್ಷಿ ಅವರ ಫೋನ್ ನಂಬರ್​ ಪಡೆದು, ಮೆಸೇಜ್​ ಹಾಕಿದರೂ ಧೋನಿ ಸ್ಟಾರ್​ ಕ್ರಿಕೆಟಿಗ ಅಂತ ಗೊತ್ತಿರುವುದಿಲ್ಲ, ಬಳಿಕ ನಡೆದಿದೆಲ್ಲ ಇತಿಹಾಸ.

2008ರ ಮಾರ್ಚ್​ನಿಂದ ಡೇಟಿಂಗ್​ ಶುರುಮಾಡಿದ ಈ ಜೋಡಿ 2010ರಲ್ಲಿ ಡೆಹ್ರಾಡೂನ್​ನ ರೆಸಾರ್ಟ್​ವೊಂದರಲ್ಲಿ ಮದುವೆಯಾಗುತ್ತದೆ. ನಂತರ ನಾಲ್ಕೂ ದಿನಗಳ ಕಳೆದ ಬಳಿಕ ಮುಂಬೈನಲ್ಲಿ ನಡೆಯುವ ಧೋನಿ ರ್ಬತ್​ಡೇ ಪಾಟಿರ್ಯಲ್ಲಿ ಸಾಕ್ಷಿ ಹಾಜರಾಗುತ್ತಾರೆ. ಈ ಜೋಡಿಗೆ ಜೀವಾ ಹೆಸರಿನ 5 ವರ್ಷದ ಮಗಳಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net