ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಸಿಎಸ್​​ಕೆ ಆಟಗಾರರು!

csk Dhoni
Published on

ಚೆನ್ನೈ: ಸದಾ ಸಮವಸ್ತ್ರದಲ್ಲಿ ಕಾಣುತ್ತಿದ್ದ ಐಪಿಎಲ್​ ಆಟಗಾರರು ಸಾಂಪ್ರದಾಯಿಕ ಉಡುಗೆ ತೊಡುವ ಮೂಲಕ ಅಪ್ಪಟ ಭಾರತೀಯರಾಗಿದ್ದಾರೆ.

ನ್ಯೂಜಿಲೆಂಡ್​ನ ಚೆನ್ನೈ ಸೂಪರ್​ ಕಿಂಗ್ಸ್​ ಆಟಗಾರ ಡೆವೊನ್​ ಕನ್​ವೇ , ಮಹೇಂದ್ರ ಸಿಂಗ್​ ಧೋನಿ ಸೇರಿ ಸಿಎಸ್​ಕೆ ತಂಡದ ಆಟಗಾರರು ದಕ್ಷಿಣ ಭಾರತದ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ. ಇದನ್ನು ತಮ್ಮ ಟ್ವಿಟ್ಟರ್​ನಲ್ಲೂ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.

ಎಂಎಸ್​ಧೋನಿ ಜತೆ ರವೀಂದ್ರ ಜಡೇಜಾ, ಡಿಯೋನ್​ ಬ್ರಾವೋ, ಶಿವಂ ದುಬೆ, ಮೊಯಿನ್​ ಅಲಿ ಹಾಗೂ ಕೋಚ್​ ಸ್ಟೆಫೆನ್​ ಫ್ಲೆಮಿಂಗ್ ಕೂಡ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net