ನನ್ನ ವೇಗ ಸ್ವಾಭಾವಿಕ, ನನಗೆ ನಾನೇ ರೋಲ್​ ಮಾಡೆಲ್​ ಅಂದ್ರು ಉಮ್ರಾನ್​ ಮಲ್ಲಿಕ್​

Umran Malik
Published on

ಮುಂಬೈ: ಐಪಿಎಲ್​ ಪಂದ್ಯಾವಳಿಯಲ್ಲಿ ವೇಗದ ಬೌಲರ್​ ಎಂದೇ ಖ್ಯಾತಿ ಪಡೆದಿರುವ ಸನ್​ರೈಸರ್ಸ್​ ಹೈದರಾಬಾದ್​ ತಂಡದ ಉಮ್ರಾನ್ ಮಲ್ಲಿಕ್​​ ತನಗೆ ತಾನೇ ರೋಲ್​ ಮಾಡೆಲ್​ ಎಂದಿದ್ದಾರೆ.

ಗಂಟೆಗೆ 145-150ಕಿಮೀ ವೇಗದಲ್ಲಿ ಬೌಲಿಂಗ್​ ಮಾಡುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಉಮ್ರಾನ್​​ ವೇಗದ ಗುಟ್ಟೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವೇಗ ಎನ್ನುವುದು ನನಗೆ ಸ್ವಾಭಾವಿಕವಾಗಿ ಬಂದಿದೆ. ಹಾಗಾಗಿ ನನಗೆ ನಾನೇ ರೋಲ್​ ಮಾಡೆಲ್​ ಆಗಿದ್ದೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇನ್ನು ಐಪಿಎಲ್​ ಬಳಿಕ ಭಾರತ ತಂಡದ ಪರ ಆಡಬೇಕೆಂದು ಕೆಲ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆರು ಪಂದ್ಯದಲ್ಲಿ 9 ವಿಕೆಟ್​ ಪಡೆಯುವ ಮೂಲಕ ಉತ್ತಮ ಬೌಲರ್ ಎನಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net