

ಡ್ಯಾಲೆಸ್: ನಿನ್ನೆ (ಜೂ.06) ನಡೆದ ಐಸಿಸಿ ಟಿ20 ವಿಶ್ವಕಪ್ 2024ರ ರೋಚಕ ಸೂಪರ್ ಓವರ್ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಅನುಭವಿಸಿ, ಕ್ರಿಕೆಟ್ ಅಭಿಮಾನಿಗಳ ವ್ಯಾಪಕ ಟೀಕೆಗೆ ಗುರಿಯಾಯಿತು. ಒಂದೆಡೆ ಟೀಕಾಕಾರರಿಂದಲೇ ತುಂಬಿದ್ದ ಸೋಷಿಯಲ್ ಮೀಡಿಯಾದಲ್ಲಿ ಟೀಂ ಇಂಡಿಯಾದ ದಿಗ್ಗಜ, ಮಹೇಂದ್ರ ಸಿಂಗ್ ಧೋನಿ ಅವರನ್ನು ಹೋಲುವ ವ್ಯಕ್ತಿಯೊಬ್ಬ ಸ್ಟೇಡಿಯಂನಲ್ಲಿ ಕುಳಿತಿರುವುದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಸದ್ಯ ಈ ದೃಶ್ಯ ಇದೀಗ ಭಾರೀ ವೈರಲ್ ಆಗಿದೆ.
ಯುಎಸ್ಎ ಮತ್ತು ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ, ಸ್ಟ್ಯಾಂಡ್ಸ್ನಲ್ಲಿ ಕುಳಿತಿರುವ ದೃಶ್ಯವೊಂದು ಇದೀಗ ಅನೇಕರ ಗೊಂದಲಕ್ಕೆ ಕಾರಣವಾಗಿದೆ. ಬಿಳಿ ಗಡ್ಡ ಬಿಟ್ಟಿರುವ ವ್ಯಕ್ತಿ, ಕಪ್ಪು ಕೂಲಿಂಗ್ ಗ್ಲಾಸ್ ಹಾಕಿಕೊಂಡು ಕ್ಯಾಮರಾದತ್ತ ಮುಖಮಾಡಿರುವುದು ದೃಶ್ಯದಲ್ಲಿ ಸೆರೆಯಾಗಿದೆ.
ಈ ದೃಶ್ಯ ನೋಡಿದ ಕ್ರಿಕೆಟ್ ಅಭಿಮಾನಿಗಳು ಒಮ್ಮೆ ಭಾರೀ ಅಚ್ಚರಿಗೆ ಒಳಗಾಗಿದ್ದು, ಯಾರಿವರು? ನೋಡಲು ಥೇಟ್ ಮಹೇಂದ್ರ ಸಿಂಗ್ ಧೋನಿ ಅವರಂತೆಯೇ ಇದ್ದಾರೆ ಎಂದು ಅಭಿಪ್ರಾಯಿಸಿದ್ದಾರೆ. ಇನ್ನು ಕೆಲವರು 'ಕ್ಯಾಪ್ಟನ್ ಕೂಲ್'ರನ್ನು ಹೋಲುವ ವ್ಯಕ್ತಿ ಕುರಿತು ಹಾಸ್ಯಸ್ಪದವಾಗಿ ಕಮೆಂಟ್ ಮಾಡಿದ್ದಾರೆ. ಸದ್ಯ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).