'ಕ್ಯಾಪ್ಟನ್​ ಕೂಲ್'​ಗೆ ದೋಖಾ! ಇಬ್ಬರು ಮಾಜಿ ಉದ್ಯಮ ಪಾಲುದಾರರ ವಿರುದ್ಧ ಕೇಸ್ ದಾಖಲು

ವಿಜಯವಾಣಿ - 2024-01-05T153336.482
Published on

ಚೆನ್ನೈ: ಭಾರತೀಯ ಕ್ರಿಕೆಟ್​ ತಂಡ ಮಾಜಿ ನಾಯಕ, ಕ್ಯಾಪ್ಟನ್ ಕೂಲ್ ಎಂದೇ ಖ್ಯಾತರಾದ ಮಹೇಂದ್ರ ಸಿಂಗ್ ಧೋನಿ ಅವರಿಗೆ 15 ಕೋಟಿ ರೂ. ವಂಚನೆಯಾಗಿದ್ದು, ದೋಖಾ ಮಾಡಿದ ಇಬ್ಬರು ಮಾಜಿ ಉದ್ಯಮ ಪಾಲುದಾರರ ವಿರುದ್ಧ ಇದೀಗ ಧೋನಿ ಕೇಸ್ ದಾಖಲಿಸಿದ್ದಾರೆ ಎಂಬ ಸುದ್ದಿ ಸದ್ಯ ವ್ಯಾಪಕವಾಗಿ ಹರಿದಾಡುತ್ತಿದೆ.

2017ರ ಹಿಂದಿನ ಕ್ರಿಕೆಟ್ ಅಕಾಡೆಮಿ ಒಪ್ಪಂದವನ್ನು ಉಲ್ಲಂಘಿಸಿದ ಕುರಿತು ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ನ ರಾಂಚಿಯ ಇಬ್ಬರು ಅಧಿಕಾರಿಗಳ ವಿರುದ್ಧ ಇದೀಗ ಧೋನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ವರದಿಯ ಪ್ರಕಾರ, ಈ ಪ್ರಕರಣವು ಮಿಹಿರ್ ಎಂಬ ಅಧಿಕಾರಿಗಳಿಗೆ ಸಂಬಂಧಿಸಿದೆ. ಆರ್ಕಾ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್‌ಗೆ ಸೇರಿದ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ಇಬ್ಬರು ಧೋನಿಗೆ 15 ಕೋಟಿ ರೂ. ವಂಚಿಸಿದ್ದಾರೆ.

ಮಿಹಿರ್ ದಿವಾಕರ್ ಮತ್ತು ಸೌಮ್ಯಾ ವಿಶ್ವಶ್ ಇಬ್ಬರೂ 2017ರಲ್ಲಿ ಜಾಗತಿಕವಾಗಿ ಕ್ರಿಕೆಟ್ ಅಕಾಡೆಮಿಯನ್ನು ನಡೆಸಲು ಒಪ್ಪಂದ ಮಾಡಿಕೊಂಡಿದ್ದರು. ವರದಿಯ ಪ್ರಕಾರ, ಆರ್ಕಾ ಸ್ಪೋರ್ಟ್ಸ್ ಒಪ್ಪಂದದ ನಿಯಮಗಳ ಪ್ರಕಾರ ಫ್ರ್ಯಾಂಚೈಸ್ ಶುಲ್ಕ ಮತ್ತು ಷೇರು ಆದಾಯವನ್ನು ಪಾವತಿಸಬೇಕಾಗಿತ್ತು. ಆದರೆ, ಅವುಗಳನ್ನು ಪಾಲಿಸಿಲ್ಲ ಎನ್ನಲಾಗಿದೆ.

ರಿಮೈಂಡರ್‌ಗಳು ಮತ್ತು ಲೀಗಲ್ ನೋಟಿಸ್‌ ನೀಡಿದ್ದರೂ ಸಹ ಅದಕ್ಕೆ ಸ್ಪಂದಿಸಿಲ್ಲ ಎಂದು ವರದಿಗಳು ತಿಳಿಸಿವೆ. ಆಗಸ್ಟ್ 15, 2021 ರಂದು ಕಂಪನಿಗೆ ನೀಡಲಾದ ಅಧಿಕಾರ ಪತ್ರವನ್ನು ಹಿಂಪಡೆಯಲು ಧೋನಿಗೆ ಹೇಳಿದ್ದಾರೆ. ವಿಧಿ ಅಸೋಸಿಯೇಟ್ಸ್ ಮೂಲಕ ಧೋನಿ ಅವರನ್ನು ಪ್ರತಿನಿಧಿಸುತ್ತಿರುವ ದಯಾನಂದ್ ಸಿಂಗ್ ಈ ಬಗ್ಗೆ ಬಹಿರಂಗಪಡಿಸಿದ್ದು, ಆರ್ಕಾ ಸ್ಪೋರ್ಟ್ಸ್ ತಮಗೆ 15 ಕೋಟಿ ರೂ. ವಂಚನೆ ಮಾಡಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಐಪಿಎಲ್ ಸೀಸನ್​ನಲ್ಲಿ ಮಿಂಚಲಿದ್ದಾರೆ ಕ್ಯಾಪ್ಟನ್​ ಕೂಲ್: 42 ವರ್ಷಕ್ಕೆ ಕಾಲಿಟ್ಟಿರುವ ಎಂ.ಎಸ್ ಧೋನಿ, ಕಳೆದ ಐಪಿಎಲ್​ ಆವೃತ್ತಿಗಳಲ್ಲಿ ಯುವಕರೇ ನಾಚುವಂತೆ ಅದ್ಬುತ ಆಟವನ್ನು ಪ್ರದರ್ಶಿಸುತ್ತಿದ್ದು, ಇದೀಗ ಹೇಳಿದಂತೆಯೇ ಮತ್ತೊಮ್ಮೆ ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳನ್ನು ಮನರಂಜಿಸಲು ಸಕಲ ತಯಾರಿಗಳನ್ನು ಮಾಡಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಈ ಬಾರಿಯೂ ತಮ್ಮ ತಂಡವನ್ನು ಫೈನಲ್​ಗೆ ತಂದು 2024ರ ಪಟ್ಟ ಅಲಂಕರಿಸಲಿದ್ದಾರೆ ಎಂಬ ಲೆಕ್ಕಾಚಾರಗಳು ಕ್ರಿಕೆಟ್​ ಫ್ಯಾನ್ಸ್​ಗಳಲ್ಲಿ ಮನೆಮಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net