"ಪವನ್ ಕಲ್ಯಾಣ್ ತಮ್ಮ 3ನೇ ಪತ್ನಿಗೂ ಡಿವೋರ್ಸ್ ಕೊಡ್ತಾರೆ" ಖ್ಯಾತ ಜ್ಯೋತೀಷರ ಹೇಳಿಕೆ ಶಾಕಿಂಗ್​..!

ppp
Published on

ಟಾಲಿವುಡ್​​ನ ಖ್ಯಾತ ನಟ ಪವನ್​ಕಲ್ಯಾಣ್​​ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲಿರ್ತಾರೆ. ಮುಂಬರುವ ಆಂಧ್ರೆ ಚುನಾವಣೆಯ ಕಡೆ ಹೆಚ್ಚು ಗಮನ ವಹಿಸುತ್ತಿರುವ ನಟ ಸದ್ಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ. ಇನ್ನು ರಾಜಕೀಯ ಜೀವನ, ಸಿನಿಮಾ ಕರಿಯರ್​ ಹೊರತು ಪಡಿಸಿದ್ರ ಹೆಚ್ಚಾಗಿ ಸದ್ದು ಮಾಡೋದು ಅವರ ಮದುವೆ ವಿಚಾರ. ಯಾಕಂದ್ರೆ ಈಗಾಗಲೇ ಪವನ್​ ಇಬ್ಬರು ಹೆಂಡತಿಯರಿಗೆ ಡಿವೋರ್ಸ್​​​ ನೀಡಿದ್ದಾರೆ.

ಸದ್ಯ ಮೂರನೇ ಪತ್ನಿಗೂ ಪವನ್​ ಡಿವೋರ್ಸ್​ ನೀಡ್ತಾರಾ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಕಾರಣ ಜ್ಯೋತಿಷ್ಯರೊಬ್ಬರ ಹೇಳಿಕೆ. ಎದುರಾಳಿ ಪಕ್ಷಗಳು ಪವನ್ ಕಲ್ಯಾಣ್ 3 ಮದುವೆ ಆಗಿದ್ದಾರೆ ಎನ್ನುವ ವಿಚಾರವನ್ನೇ ದಾಳವಾಗಿಸಿಕೊಂಡು ವಾಗ್ದಾಳಿ ನಡೆಸುತ್ತಾ ಬರುತ್ತಿದ್ದು, ಅದಕ್ಕೆಲ್ಲಾ ಪವರ್ ಸ್ಟಾರ್ ತಿರುಗೇಟು ನೀಡುತ್ತಲೇ ಬಂದಿದ್ದಾರೆ.

ಈಗಾಗಲೇ ಪವನ್​ ಕಲ್ಯಾಣ್​, ಇಬ್ಬರಿಗೆ ಡಿವೋರ್ಸ್ ಕೊಟ್ಟು ರಷ್ಯಾ ಮೂಲದ ಅನ್ನಾ ಲೆಜ್ನೆವಾ ಎಂಬುವವರ ಕೈ ಹಿಡಿದಿದ್ದು, ಈ ವರ್ಷವೇ ಆಕೆಗೂ ಪವನ್ ಡಿವೋರ್ಸ್ ನೀಡುತ್ತಾರೆ ಎಂದು ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ ಭವಿಷ್ಯ ನುಡಿದಿದ್ದಾರೆ.

ಸೆಲೆಬ್ರೆಟಿ ಜ್ಯೋತಿಷಿ ವೇಣುಸ್ವಾಮಿ, ಸೆಲೆಬ್ರಿಟಿಗಳ ವೃತ್ತಿ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡಿ ವೇಣುಸ್ವಾಮಿ ಜನಪ್ರಿಯತೆ ಗಳಿಸಿದ್ದವರು. ನಾಗಚೈತನ್ಯಾ, ಸಮಂತಾ, ಪವನ್ ಕಲ್ಯಾಣ್, ರಶ್ಮಿಕಾ ಮಂದಣ್ಣ, ಪ್ರಭಾಸ್ ಸೇರಿದಂತೆ ಹಲವರ ಬಗ್ಗೆ ವೇಣುಸ್ವಾಮಿ ಮಾತನಾಡಿ ಚರ್ಚಗೆ ಗ್ರಾಸವಾಗಿದ್ದರು. ಆದರೆ ಆತ ಹೇಳಿದ್ದರಲ್ಲಿ ಒಂದಷ್ಟು ವಿಚಾರಗಳು ನಿಜವಾಗಿವೆ.

ಹಾಗಾಗಿ ಇದೀಗ ಪವನ್​ 3ನೇ ಪತ್ನಿಗೂ ಡಿವೋರ್ಸ್​ ನೀಡಲಿದ್ದಾರೆಯೇ ಎಂಬ ಪ್ರಶ್ಎ ಹುಟ್ಟಿಕೊಂಡಿದೆ. 'ಸಲಾರ್' ಸಿನಿಮಾ ಕೂಡ ಸೋಲುತ್ತದೆ ಎಂದು ವೇಣುಸ್ವಾಮಿ ಹೇಳಿದ್ದು, ಇದು ಪ್ರಭಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಸಿನಿಮಾ ಸಕ್ಸಸ್ ಕಂಡಿದೆ. ಇದೀಗ ಪವನ್ ಕಲ್ಯಾಣ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿ ವೇಣುಸ್ವಾಮಿ ಮತ್ತೆ ಸುದ್ದಿಯಲ್ಲಿದ್ದು, ಪವನ್ ಕಲ್ಯಾಣ್ ಮತ್ತೆ ಡಿವೋರ್ಸ್ ಪಡೆಯುತ್ತಾರೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net