ಐಪಿಎಲ್ ಪ್ರಶಸ್ತಿ​ ಗೆಲುವಿನ ಬೆನ್ನಲ್ಲೇ ಮತ್ತೊಂದು ಗುಡ್​​ನ್ಯೂಸ್​ ನೀಡಿದ ಧೋನಿ!

dhoni child web
Published on

ನವದೆಹಲಿ: ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ 4ನೇ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲಿಸಿಕೊಟ್ಟ ಬೆನ್ನಲ್ಲೇ ಮಹೇಂದ್ರ ಸಿಂಗ್ ಧೋನಿ, ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದ್ದಾರೆ. ಧೋನಿ ಪತ್ನಿ ಸಾಕ್ಷಿ 2ನೇ ಬಾರಿ ಗರ್ಭಿಣಿಯಾಗಿದ್ದು, 2022ರಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಬಹಿರಂಗಗೊಂಡಿದೆ.

ಧೋನಿ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಚೆನ್ನೈ ಸೂಪರ್‌ಕಿಂಗ್ಸ್ ಸಹ-ಆಟಗಾರ ಸುರೇಶ್ ರೈನಾ ಅವರ ಪತ್ನಿ ಪ್ರಿಯಾಂಕಾ ಚೌಧರಿ ಖಚಿತಪಡಿಸಿದ್ದಾರೆ. 2010ರ ಜುಲೈನಲ್ಲಿ ವಿವಾಹವಾಗಿದ್ದ ಧೋನಿ-ಸಾಕ್ಷಿಗೆ 2015ರಲ್ಲಿ ಪುತ್ರಿ ಝಿವಾ ಜನಿಸಿದ್ದಳು.

ಸಿಎಸ್‌ಕೆ ಪ್ರಶಸ್ತಿ ಗೆಲುವಿನ ಬಳಿಕ 40 ವರ್ಷದ ಧೋನಿ, ಪತ್ನಿ ಸಾಕ್ಷಿ ಮತ್ತು ಪುತ್ರಿ ಝಿವಾಳನ್ನು ತಬ್ಬಿಕೊಂಡ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ರೈನಾ ಪತ್ನಿ ಪ್ರಿಯಾಂಕಾ, ಸಾಕ್ಷಿ ಸದ್ಯ 4 ತಿಂಗಳ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net