PHOTOS: ವೈರಲ್​ ಆದ ಧೋನಿ ಬರ್ತ್​ಡೇ ಸೆಲೆಬ್ರೇಷನ್​ ಫೋಟೋಸ್​

ms dhoni for web
Published on

ರಾಂಚಿ: ಕಳೆದ ಒಂದು ವರ್ಷದಿಂದ ಕ್ರಿಕೆಟ್​ ಜೀವನದಿಂದಲೇ ದೂರವಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್​ ಧೋನಿ, ಮೊನ್ನೆಯಷ್ಟೇ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇಡೀ ವಿಶ್ವ ಕ್ರಿಕೆಟ್​ ವಲಯವೇ ಮಾಜಿ ನಾಯಕನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿತ್ತು. ಜಾರ್ಖಂಡ್​ ರಾಜಧಾನಿ ರಾಂಚಿ ನಗರದ ಹೊರವಲಯದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಧೋನಿ ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಸ್ನೇಹಿತರ ವಲಯದಲ್ಲಿ ಮಹಿ ಎಂದು ಕರೆಸಿಕೊಳ್ಳುವ ಧೋನಿ ಹುಟ್ಟುಹಬ್ಬದ ಫೋಟೋಸ್​ ಇದೀಗ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್​ ಆಗಿವೆ.

ಫಾಮ್​ರ್ನಲ್ಲೇ ಕೃಷ್ಟಿ ಮಾಡಿಕೊಂಡಿರುವ ಧೋನಿ, ಇತ್ತೀಚೆಗಷ್ಟೇ ಸಾವಯವ ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಲಾಕ್​ಡೌನ್​ನಿಂದಾಗಿ ಪತ್ನಿ ಸಾ ಸಿಂಗ್​, ಮಗಳು ಝೀವಾ ಜತೆಯಲ್ಲಿರುವ ಧೋನಿ ನಿರೀಕ್ಷೆಯಂತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಹಾರ್ದಿಕ್​ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಧೋನಿಗೆ ಕುತೂಹಲ ನೀಡಲು ರ್ಬತ್​ಡೇ ವಿಷ್​ ಮಾಡುವ ಸಲುವಾಗಿ ರಾಂಚಿಗೇ ಹೋಗಿದ್ದರು. ಪತ್ನಿ ಸಾಕ್ಷಿ ಸಿಂಗ್​ ಧೋನಿ ಹುಟ್ಟುಹಬ್ಬದಂದು ಧೋನಿಯ ಹಲವು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದರು.

ಧೋನಿ ಜತೆಗಿರುವಾಗ ಕ್ರಿಕೆಟ್​ ವಿಷಯ ಮಾತನಾಡುವುದಿಲ್ಲ, ಅವರಿಗೆ ಸದ್ಯ ಕ್ರಿಕೆಟ್​ನಿಂದ ನಿವೃತ್ತಿಯಾಗುವ ಯೋಚನೆಯೂ ಇಲ್ಲ ಎಂದು ಬಾಲ್ಯ ಗೆಳೆಯ ಹಾಗೂ ಮ್ಯಾನೇಜರ್​ ದಿವಾಕರ್​ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಜುಲೈ 10ಕ್ಕೆ ಧೋನಿ ಕ್ರಿಕೆಟ್​ ಆಡಿ ಬರೋಬ್ಬರಿ ಒಂದು ವರ್ಷ ಕಳೆಯಿತು. 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್ ಪಂದ್ಯವೇ ಧೋನಿ ಕಡೇ ಪಂದ್ಯವಾಗಿದೆ. ಐಪಿಎಲ್​ ಸಿದ್ಧತೆಗಾಗಿ ಒಂದು ತಿಂಗಳು ಮೊದಲೇ ಚೆನ್ನೈಗೆ ಆಗಮಿಸಿದರೂ ಕರೊನಾ ವೈರಸ್​ ಭೀತಿಯಿಂದ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net