

ಕೊಲಂಬೊ: ಅಗ್ರ ಕ್ರಮಾಂಕದ ವೈಫಲ್ಯದ ನಡುವೆಯೂ ಅನುಭವಿ ಬೆಥ್ ಮೂನಿ (109 ರನ್, 114 ಎಸೆತ, 11 ಬೌಂಡರಿ) ದಿಟ್ಟ ಶತಕದ ಸಾಹಸ ಹಾಗೂ ಬೌಲರ್ಗಳ ಸಂಟಿತ ನಿರ್ವಹಣೆ ಬಲದಿಂದ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ತಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ಎದುರು 107 ರನ್ಗಳ ಬೃಹತ್ ಗೆಲುವು ದಾಖಲಿಸಿದೆ. ಇದರೊಂದಿಗೆ ಅಲೀಸಾ ಹೀಲಿ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಸತತ ಮೂರನೇ ಸೋಲಿಗೆ ತುತ್ತಾದ ಪಾಕ್ನ ಸೆಮಿೈನಲ್ ಹಾದಿ ಜಟಿಲಗೊಂಡಿದೆ.
ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆಸೀಸ್, 76 ರನ್ಗಳಿಗೆ 7 ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಆಗ 9ನೇ ವಿಕೆಟ್ಗೆ ಮೂನಿ ಜತೆಯಾದ ಅಲನ್ ಕಿಂಗ್ (51* ರನ್, 49 ಎಸೆತ, 3 ಬೌಂಡರಿ, 3 ಸಿಕ್ಸರ್) 97 ಎಸೆತಗಳಲ್ಲಿ 106 ರನ್ ಕಸಿದರು. ಇದರೊಂದಿಗೆ ಆಸೀಸ್ 9 ವಿಕೆಟ್ಗೆ 221 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಪ್ರತಿಯಾಗಿ ಕಿಮ್ ಗಾರ್ತ್ (14ಕ್ಕೆ 3) ಸಹಿತ ಇತರ ಬೌಲರ್ಗಳ ದಾಳಿ ಎದುರು ಕನಿಷ್ಠ ಪ್ರತಿರೋಧವೂ ತೋರದ ಪಾಕಿಸ್ತಾನ 36.3 ಓವರ್ಗಳಲ್ಲಿ 114 ರನ್ಗಳಿಗೆ ಸರ್ವಪತನ ಕಂಡಿತು.
ಆಸ್ಟ್ರೆಲಿಯಾ: 9 ವಿಕೆಟ್ಗೆ 221 (ಅಲೀಸಾ 20, ಲಿಚ್ಛೀಫಿಲ್ಡ್ 10, ಪೆರ್ರಿ 5, ಬೆಥ್ ಮೂನಿ 109, ಸುದರ್ಲ್ಯಾಂಡ್ 1, ಮೆಕ್ಗ್ರಾತ್ 5, ಕಿಮ್ ಗಾರ್ತ್ 11, ಅಲನ್ ಕಿಂಗ್ 51*, ನಶ್ರ ಸಂಧು 37ಕ್ಕೆ 3, ರಮೀನಾ 29ಕ್ಕೆ 2). ಪಾಕಿಸ್ತಾನ: 36.3 ಓವರ್ಗಳಲ್ಲಿ 114 (ಸದ್ 5, ಮುನೀಬಾ 3, ಸಿದ್ರಾ 35, ಸಿದ್ರಾ ನವಾಜ್ 5, ನಟಾಲಿಯಾ 1, ಫಾತೀಮಾ 11, ರಮೀನಾ 15, ನಶ್ರ 11, ಕಿಮ್ ಗಾರ್ತ್ 14ಕ್ಕೆ 3, ಸುದರ್ಲ್ಯಾಂಡ್ 15ಕ್ಕೆ 2).