

ಚೆನ್ನೈ: ಪಂಕಜ್ ಮೋಹಿತೆ (11) ಮತ್ತು ಮೋಹಿತ್ ಗೋಯತ್ (9) ಭರ್ಜರಿ ರೈಡಿಂಗ್ ಬಲದಿಂದ ಪುಣೇರಿ ಪಲ್ಟಾನ್ ತಂಡ ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸತತ 4ನೇ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಚೆನ್ನೈ ಚರಣದಲ್ಲಿ ಮಂಗಳವಾರ ನಡೆದ ಏಕೈಕ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ತಂಡ ಪಟನಾ ಪೈರೇಟ್ಸ್ ಎದುರು 46-28 ಅಂತರದಿಂದ ಗೆಲುವು ಸಾಧಿಸಿತು.
ಮೊದಲಾರ್ಧದಲ್ಲಿ ಪಟನಾವನ್ನು ಒಮ್ಮೆ ಆಲೌಟ್ ಮಾಡಿ 22-15ರಿಂದ ಮುನ್ನಡೆ ಸಾಧಿಸಿದ ಪುಣೇರಿ ತಂಡ ದ್ವೀತಿಯಾರ್ಧದಲ್ಲಿ 2 ಬಾರಿ ಆಲೌಟ್ ಮಾಡಿ ಇನ್ನಷ್ಟು ಪ್ರಾಬಲ್ಯ ಸಾಧಿಸಿತು. ಪಟನಾ ಪರ ಸಚಿನ್ (8) ಹೋರಾಟ ವ್ಯರ್ಥಗೊಂಡಿತು.