ರಣಜಿ ಟ್ರೋಫಿಯಲ್ಲಿ ಯಶಸ್ವಿ ಪುನರಾಗಮನ ಕಂಡ ಮೊಹಮದ್ ಶಮಿ

web shami
Published on

ಇಂದೋರ್: ಗಾಯದಿಂದ ಚೇತರಿಸಿಕೊಂಡು ಮರಳಿರುವ ವೇಗಿ ಮೊಹಮದ್​ ಶಮಿ ಬಂಗಾಳ ಪರ ರಣಜಿ ಟ್ರೋಫಿ ಪಂದ್ಯದ 2ನೇ ದಿನ 4 ವಿಕೆಟ್​ ಕಬಳಿಸಿ ಮಿಂಚಿದರು. ಒಟ್ಟಾರೆ 19 ಓವರ್​ಗಳಲ್ಲಿ 4 ಮೇಡನ್​ ಸಹಿತ 54 ರನ್​ಗಳಿಗೆ 4 ವಿಕೆಟ್​ ಗಳಿಸಿದ ಶಮಿ, ಎದುರಾಳಿ ಮಧ್ಯಪ್ರದೇಶವನ್ನು 167 ರನ್​ಗಳಿಗೆ ನಿಯಂತ್ರಿಸಲು ನೆರವಾದರು.

ಇನಿಂಗ್ಸ್​ನ ಕೊನೇ 2 ಎಸೆತಗಳಲ್ಲಿ ವಿಕೆಟ್​ ಕಬಳಿಸಿದ ಶಮಿ, 2ನೇ ಇನಿಂಗ್ಸ್​ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್​ ಪಡೆದರೆ ಹ್ಯಾಟ್ರಿಕ್​ ಸಾಧಿಸುವ ಅವಕಾಶವನ್ನೂ ಹೊಂದಿದ್ದಾರೆ. ರಣಜಿಯಲ್ಲಿ ಯಶಸ್ವಿ ಪುನರಾಗಮನ ಕಂಡಿರುವುದರಿಂದ ಶಮಿ ಆಸ್ಟ್ರೆಲಿಯಾ ಪ್ರವಾಸದಲ್ಲಿರುವ ಭಾರತ ಟೆಸ್ಟ್​ ತಂಡವನ್ನು ಶ್ರೀದಲ್ಲೇ ಕೂಡಿಕೊಳ್ಳುವ ಸಾಧ್ಯತೆಯೂ ಕಾಣಿಸಿದೆ.

ಇಂದೋರ್​ನಲ್ಲಿ ನಡೆಯುತ್ತಿರುವ ಪಂದ್ಯದ 2ನೇ ಇನಿಂಗ್ಸ್​ನಲ್ಲೂ ಶಮಿ ದಾಳಿಯನ್ನು ಗಮನಿಸಿದ ಬಳಿಕ ಆಯ್ಕೆ ಸಮಿತಿ ಶಮಿ ಆಯ್ಕೆಯತ್ತ ಒಲವು ತೋರುವ ನಿರೀಕ್ಷೆ ಇದೆ. ಇದರಿಂದ ಅವರು ಆಸೀಸ್​ ವಿರುದ್ಧದ 2ನೇ ಟೆಸ್ಟ್​ಗೆ ಮುನ್ನ ತಂಡವನ್ನು ಕೂಡಿಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net