ಎರಡು ಬಾರಿ ಕ್ಷಮೆ ಕೇಳಿದ್ದೇನೆ ಎಂದ ಆರ್​ಸಿಬಿ ತಂಡದ ಸ್ಟಾರ್ ವೇಗಿ!

Siraj
Published on

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ತನ್ನದೇ ತಂಡದ ಯುವ ಆಟಗಾರನ ಬಳಿ ಕ್ಷಮೆ ಕೇಳಿದ್ದಾರೆ. ಮೊಹಮ್ಮದ್ ಸಿರಾಜ್ ಪಂದ್ಯದ 19ನೇ ಓವರ್‌ ವೇಳೆ, ಮಹಿಪಾಲ್ ಲೊಮ್ರೊರ್ ಅವರ ವಿರುದ್ಧ ಮೈದಾನದಲ್ಲೇ ಕಿಡಿಕಾರಿದ್ದರು. ಸಿಟ್ಟಿನಲ್ಲಿ ನಿಂದಿಸಿದ ಘಟನೆ ನಡೆದಿತ್ತು.

ಮೈದಾನದಲ್ಲಿ ತನ್ನದೇ ತಂಡದ ಆಟಗಾರನನ್ನು ನಿಂದಿಸಿದ ಕಾರಣಕ್ಕೆ ಆರ್​ಸಿಬಿ ಅಭಿಮಾನಿಗಳು ಸಿರಾಜ್ ನಡೆಯನ್ನು ಟೀಕಿಸಿದ್ದರು. ಇದೀಗ ಪಂದ್ಯದ ಬಳಿಕ ಮೊಹಮ್ಮದ್ ಸಿರಾಜ್ ಮಹಿಪಾಲ್ ಲೊಮ್ರೊರ್ ಬಳಿ ಕ್ಷಮೆಯಾಚಿಸಿದ್ದಾರೆ.

ಕೋಪಗೊಂಡ ಸಿರಾಜ್

19ನೇ ಓವರ್​ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಧ್ರುವ ಜುರೆಲ್ ಎರಡು ರನ್ ಗಳಿಸಲು ಮುಂದಾಗುತ್ತಾರೆ. ಈ ವೇಳೆ ಬೌಂಡರಿ ಲೈನ್​ ಬಳಿ ಇದ್ದ ಮಹಿಪಾಲ್ ಲೊಮ್ರೊರ್ ಬಾಲ್​ ಥ್ರೋ ಮಾಡುವಾಗ ಸ್ವಲ್ಪ ತಡವಾದ್ದರಿಂದ ರನೌಟ್ ಮಾಡುವ ಅವಕಾಶ ಕೈತಪ್ಪುತ್ತದೆ. ಇದರಿಂದ ಸಿರಾಜ್ ಕೋಪಗೊಂಡು, ಮೈದಾನದಲ್ಲೇ ಹತಾಷೆ ವ್ಯಕ್ತಪಡಿಸುತ್ತಾರೆ.

ಪಂದ್ಯದ ಬಳಿಕ ಆರ್​ಸಿಬಿ ತಂಡ ಬಿಡುಗಡೆ ಮಾಡಿದ ವಿಡಿಯೋವೊಂದರಲ್ಲಿ ತನ್ನ ತಪ್ಪಿನ ಅರಿವಾಗಿ ಸಿರಾಜ್ ಕ್ಷಮೆ ಕೇಳಿದ್ದಾರೆ. "ನಾನು ತುಂಬಾ ಕೋಪಗೊಂಡಿದ್ದೇನೆ, ಕ್ಷಮಿಸಿ. ನಾನು ಈಗಾಗಲೇ ಎರಡು ಬಾರಿ ಕ್ಷಮೆಯಾಚಿಸಿದ್ದೇನೆ. ನಾನು ಮೈದಾನದ ಹೊರಗೆ ಆ ರೀತಿ ವರ್ತಿಸುವುದಿಲ್ಲ. ಪಂದ್ಯ ಮುಗಿದ ನಂತರ ಎಲ್ಲವೂ ಶಾಂತವಾಗುತ್ತದೆ" ಎಂದು ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ.

ಸಿರಾಜ್ ಕ್ಷಮೆಯಾಚಿಸುತ್ತಿದ್ದಂತೆ ಮಹಿಪಾಲ್ ಲೊಮ್ರೊರ್ ಪ್ರತಿಕ್ರಿಯಸಿ, ಪರವಾಗಿಲ್ಲ ಸಿರಾಜ್ ಭಾಯ್... ದೊಡ್ಡ ಪಂದ್ಯಗಳಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net