

ಸಿಡ್ನಿ: ರೋಹಿತ್ ಶರ್ಮ ಸಿಡ್ನಿ ಟೆಸ್ಟ್ನಿಂದ ಹೊರಗುಳಿಯುವುದರೊಂದಿಗೆ ಭಾರತ ತಂಡದ ನಾಯಕನೊಬ್ಬ ಫಿಟ್ ಇದ್ದರೂ, ಫಾರ್ಮ್ ಕೊರತೆಯಿಂದಾಗಿ ಆಡುವ 11ರ ಬಳಗದಿಂದ ಹೊರಬಿದ್ದ ಮೊದಲ ದೃಷ್ಟಾಂತ ದಾಖಲಾಯಿತು. ಈ ಹಿಂದೆ ಅಜರುದ್ದೀನ್, ಸೌರವ್ ಗಂಗೂಲಿ ಅವರಂಥ ನಾಯಕರು ಎಷ್ಟೇ ರನ್ಬರ ಎದುರಿಸಿದ್ದರೂ, ಸರಣಿಯ ನಡುವೆ ತಂಡದಿಂದ ಹೊರಬಿದ್ದಿರಲಿಲ್ಲ. ಹೀಗಾಗಿ ರೋಹಿತ್ ತ್ಯಾಗಕ್ಕೆ ಮಾಜಿ ಕ್ರಿಕೆಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರೋಹಿತ್ ಹೊರಗುಳಿದಿದ್ದನ್ನು ಸಂಜಯ್ ಮಂಜ್ರೇಕರ್ ಹೊಗಳಿದ್ದರೆ, ರೋಹಿತ್ಗೆ ಸೂಕ್ತ ಗೌರವ ನೀಡಬೇಕಿತ್ತು. ಇದು ಕೆಟ್ಟ ಸಂದೇಶ ರವಾನಿಸುತ್ತಿದೆ ಎಂದು ನವಜೋತ್ ಸಿಂಗ್ ಸಿಧು ಟೀಕಿಸಿದ್ದಾರೆ.
ಇನ್ನು ಭಾರತ ಡಬ್ಲ್ಯುಟಿಸಿ ಫೈನಲ್ಗೇರದಿದ್ದರೆ ಮೆಲ್ಬೋರ್ನ್ ಪಂದ್ಯವೇ ರೋಹಿತ್ರ ಕೊನೇ ಟೆಸ್ಟ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಸುನೀಲ್ ಗಾವಸ್ಕರ್ ಮತ್ತು ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.