

ಫುಕೆಟ್ (ಥಾಯ್ಲೆಂಡ್): ಟೋಕಿಯೊ ಒಲಿಂಪಿಕ್ಸ್ ರಜತ ವಿಜೇತೆ ಹಾಗೂ ವೇಟ್ಲಿಫ್ಟಿಂಗ್ ತಾರೆ ಮೀರಾಬಾಯಿ ಚಾನು ಸ್ಪರ್ಧಾಕಣಕ್ಕೆ ಮರಳಲು ಸಜ್ಜಾಗಿದ್ದಾರೆ. ಗಾಯದಿಂದಾಗಿ ಕಳೆದ ಆರು ತಿಂಗಳಿನಿಂದ ಯಾವುದೇ ಕೂಟದಲ್ಲಿ ಸ್ಪರ್ಧಿಸದ ಮೀಬಾಯಿ, ಸೋಮವಾರದಿಂದ ನಡೆಯಲಿರುವ ಐಡಬ್ಲ್ಯುಎ್ ವಿಶ್ವಕಪ್ನಲ್ಲಿ ಭಾಗವಹಿಸಲಿದ್ದು, ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಖಚಿತಪಡಿಸಿಕೊಳ್ಳಲು ಹೋರಾಡಲಿದ್ದಾರೆ.
ಈ ವಿಶ್ವಕಪ್ ವೇಟ್ಲಿಫ್ಟಿಂಗ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆಯ ಕೊನೆಯ ಸ್ಪರ್ಧೆಯಾಗಿದೆ. ಜತೆಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸುವ ವೇಟ್ಲ್ಟಿರ್ಗಳಿಗೆ ಇಲ್ಲಿ ಸ್ಪರ್ಧೆಯೂ ಕಡ್ಡಾಯವಾಗಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹಾಂಗ್ರೆೌ ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸುವ ವೇಳೆ ಮೀರಾಬಾಯಿ ಗಾಯಗೊಂಡಿದ್ದರು.
ಮಹಿಳೆಯರ 49 ಕೆಜಿ ವಿಭಾಗದ ಒಲಿಂಪಿಕ್ಸ್ ಅರ್ಹತಾ ರ್ಯಾಂಕಿಂಗ್ನಲ್ಲಿ 29 ವರ್ಷದ ಮೀರಾ ಸದ್ಯ 2ನೇ ಸ್ಥಾನದಲ್ಲಿದ್ದಾರೆ. ಮಣಿಪುರದ ಮೀರಾಬಾಯಿ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಸಂಪಾದಿಸುವುದು ಈಗಾಗಲೆ ಬಹುತೇಕ ಖಚಿತವೆನಿಸಿದೆ. ಈ ವಿಶ್ವಕಪ್ ಮೀರಾ ಸ್ಪರ್ಧೆಗೆ ಅಧಿಕೃತ ಮುದ್ರೆಯನ್ನೂ ಒತ್ತಲಿದೆ.
2024ರ ಒಲಿಂಪಿಕ್ಸ್ ಅರ್ಹತಾ ನಿಯಮದ ಪ್ರಕಾರ, 2023ರ ವಿಶ್ವ ಚಾಂಪಿಯನ್ಷಿಪ್ ಮತ್ತು 2024ರ ವಿಶ್ವಕಪ್ನಲ್ಲಿ ಸ್ಪರ್ಧೆ ಕಡ್ಡಾಯವಾಗಿದೆ. ವಿಶ್ವಕಪ್ ನಂತರದಲ್ಲಿ ಆಯಾ ದೇಹತೂಕ ವಿಭಾಗದ ಅಗ್ರ 10 ವೇಟ್ಲಿಫ್ಟರ್ಗಳು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಖಚಿತಪಡಿಸಿಕೊಳ್ಳಲಿದ್ದಾರೆ. ವೈಯಕ್ತಿಕ ಶ್ರೇಷ್ಠ 207 ಕೆಜಿ ಭಾರ ಎತ್ತಿರುವ ಮೀರಾ, ವಿಶ್ವಕಪ್ನಲ್ಲಿ 185 ಕೆಜಿ ಆರಂಭಿಕ ಭಾರ ಎತ್ತುವುದಾಗಿ ಎಂಟ್ರಿ ಮಾಡಿಸಿಕೊಂಡಿದ್ದಾರೆ. ಇದರಿಂದ ಅವರು ಬಿ ಗ್ರೂಪ್ನಲ್ಲಿ ಸ್ಪರ್ಧಿಸಬೇಕಾಗಿದ್ದು, ಪದಕ ಸ್ಪರ್ಧೆಯಿಂದ ಬಹುತೇಕ ಹೊರಗುಳಿದಂತಾಗಿದೆ.
ಕಾಮನ್ವೆಲ್ತ್ ಗೇಮ್ಸ್ ರಜತ ವಿಜೇತೆ ಬಿಂದ್ಯಾರಾಣಿ ದೇವಿ ವಿಶ್ವಕಪ್ನಲ್ಲಿ ಸ್ಪರ್ಧಿಸಲಿರುವ ಮತ್ತೋರ್ವ ಭಾರತೀಯರಾಗಿದ್ದಾರೆ. ಆದರೆ ಅವರು ಸ್ಪರ್ಧಿಸುತ್ತಿರುವ 55 ಕೆಜಿ ವಿಭಾಗದ ಸ್ಪರ್ಧೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇರುವುದಿಲ್ಲ.