

ಅಹಮದಾಬಾದ್: 36ನೇ ರಾಷ್ಟ್ರೀಯ ಕ್ರೀಡಾಕೂಡದ ಮಹಿಳೆಯರ ವಿಭಾಗದ ವೈಟ್ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಚಿನ್ನದ ಪದಕ ಗೆದ್ದಿದ್ದಾರೆ. 49 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಚಾನು, 191 ಕೆ.ಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಮೀರಾಬಾಯಿ ಚಾನು ಬರ್ಮಿಂಗ್ಹ್ಯಾಮ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮಣಿಪುರವನ್ನು ಸ್ಪರ್ಧಿಸಲು ಹೆಮ್ಮೆಯಾಗುತ್ತದೆ. ಕ್ರೀಡಾಕೂಟದ ಉದ್ಘಾಟನೆಯ ದಿನ ರಾಜ್ಯ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿತ್ತು. ಈ ಅವಕಾಶ ಮರೆಯಲಾಗದ ಕ್ಷಣ. ಈ ವೇಳೆ ಪದಕ ಗೆಲ್ಲಬೇಕೆಂದು ದೃಢ ಸಂಕಲ್ಪ ಮಾಡಿಕೊಂಡೆ ಎಂದು ಮೀರಾಬಾಯಿ ಚಾನು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಎನ್ಐಎಸ್ ಪಟಿಯಾಲಾದಲ್ಲಿ ವ್ಯಾಯಾಮ ಮಾಡುವಾಗ ನನ್ನ ಎಡ ಮಣಿಕಟ್ಟಿಗೆ ಹಾನಿಯಾಗಿತ್ತು. ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸ್ಪರ್ಧಿಸುವ ಅವಕಾಶ ತಪ್ಪುತ್ತಿತ್ತು. ಈ ವೇಳೆ ಎಚ್ಚರಿಕೆ ವಹಿಸಿಕೊಂಡೆ. ಯಾವುದೇ ಅಪಾಯಕ್ಕೆ ಸಿಲುಕಿಕೊಳ್ಳದಂತೆ ಜಾಗರೂಕತೆ ಮಾಡಿಕೊಂಡೆ ಎಂದಿದ್ದಾರೆ. (ಏಜೆನ್ಸೀಸ್)