ಕ್ರಿಕೆಟ್​ ಇತಿಹಾಸದಲ್ಲಿ ನೀವು ಇದುವರೆಗೂ ನೋಡಿರದ ಅದ್ಭುತ ಕ್ಯಾಚ್​ ಇದು! ವಿಡಿಯೋ ವೈರಲ್​

Catch
Published on

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ಅದ್ಭುತ ಕ್ಯಾಚ್‌ಗಳು ದಾಖಲಾಗಿವೆ. ಆ ಸಾಲಿಗೆ ಇತ್ತೀಚೆಗಷ್ಟೇ ನಡೆದ ಟಿ20 ಪಂದ್ಯದಲ್ಲಿ ಆಟಗಾರನೊಬ್ಬ ಹಿಡಿದ ಅದ್ಭುತ ಕ್ಯಾಚ್ ಕೂಡ ಸೇರಿಕೊಂಡಿದೆ. ಸದ್ಯ ಕ್ರೀಡಾ ಜಗತ್ತಿನಲ್ಲಿ ಈ ಕ್ಯಾಚ್​ ಸಂಚಲನ ಮೂಡಿಸುತ್ತಿದೆ. ಗಾಳಿಯಲ್ಲಿ ಹಾರಿ ಒಂದೇ ಕೈಯಿಂದ ಹಿಡಿದ ಆ ಕ್ಯಾಚ್ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

2024ರ ಟಿ20 ವಿಶ್ವಕಪ್ ಟೂರ್ನಿ ಅಮೆರಿಕದಲ್ಲಿ ನಡೆಯುತ್ತಿದೆ. ಬ್ಯಾಟ್ಸ್‌ಮನ್‌ಗಳಿಂದ ಯಾವುದೇ ಸ್ಫೋಟಕ ಆಟ ಹೊರಬರುತ್ತಿಲ್ಲ. ಆದರೆ, ಬೌಲರ್‌ಗಳು ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಈ ಟೂರ್ನಿಯಲ್ಲಿ ಈವರೆಗೂ ಮಿಂಚಿನ ಕ್ಯಾಚ್‌ಗಳು ದಾಖಲಾಗಿಲ್ಲ. ವಿಶೇಷ ಕ್ಷಣವೂ ಇಲ್ಲ. ಹೀಗಾಗಿ ಟಿ20 ವಿಶ್ವಕಪ್​ ತುಂಬಾ ನೀರಸ ಎನಿಸುತ್ತಿದೆ. ವಿಶ್ವಕಪ್​ ಹೊರತಾಗಿ ಇದೀಗ ವಿಶ್ವ ಕ್ರಿಕೆಟ್ ಇತಿಹಾಸದಲ್ಲಿ ಮನ ಮಿಡಿಯುವ ಕ್ಯಾಚ್ ಒಂದು ದಾಖಲಾಗಿದೆ.

ಇತ್ತೀಚೆಗಷ್ಟೇ ಬೆಂಗಾಲ್ ಟಿ20 ಲೀಗ್​ನಲ್ಲಿ ನಡೆದ ಪಂದ್ಯದಲ್ಲಿ ಗಮನಸೆಳೆಯುವ ಕ್ಯಾಚ್​ ಒಂದು ದಾಖಲಾಗಿದೆ. ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಬೌಲರ್ ಎಸೆದ ಚೆಂಡನ್ನು ಬ್ಯಾಟರ್ ಬಲವಾಗಿ ಬಾರಿಸಿದರು. ಈ ವೇಳೆ ಚೆಂಡು ನೇರವಾಗಿ ಸಿಕ್ಸರ್ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಫೀಲ್ಡರ್ ಅಭಿಷೇಕ್ ದಾಸ್ ಎಲ್ಲರು ಹುಬ್ಬೇರಿಸುವಂತೆ ಕ್ಯಾಚ್ ಹಿಡಿದರು.

ಬೌಂಡರಿ ಗೆರೆ ದಾಟಿ ಹೋಗುತ್ತಿದ್ದ ಚೆಂಡನ್ನು ಹಕ್ಕಿಯಂತೆ ಹಾರಿ, ಒಂದು ಕೈಯಿಂದ ಹಿಡಿದು ಕೆಳಗೆ ಬಿದ್ದರು. ಅಭಿಷೇಕ್​ ದಾಸ್​ ಚೆಂಡನ್ನು ಸ್ವೀಕರಿಸಿದ ರೀತಿ ರೋಮಾಂಚನವಾಗಿದೆ. ಈ ಕ್ಯಾಚ್ ಹಿಡಿದ ಬಳಿಕ ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್, ಟ್ರೇಡ್‌ಮಾರ್ಕ್ ಶೈಲಿಯಲ್ಲಿ ತೊಡೆ ತಟ್ಟಿದರು. ಸದ್ಯ ಈ ವಿಡಿಯೋ ಕ್ರಿಕೆಟ್ ಜಗತ್ತನಲ್ಲಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net