VIDEO: ಲೆಜೆಂಡ್ಸ್ ಓನ್ಲೀ ಲೀಗ್​ - ಮೈಕ್​ ಟೈಸನ್ ಹೊಸ ಉದ್ಯಮ!

Mike Tyson
Published on

ನವದೆಹಲಿ: ಬಾಕ್ಸಿಂಗ್​ ದಂತಕಥೆ ಮೈಕ್ ಟೈಸನ್ ಮರುಪ್ರವೇಶಕ್ಕೆ ಅಖಾಡ ಸಿದ್ಧವಾಗಿದ್ದು ಸೆಪ್ಟಂಬರ್ 12ರಂದು ಬಾಕ್ಸಿಂಗ್ ಪಂದ್ಯ ನಡೆಯಲಿದೆ. ಕಳೆದ ತಿಂಗಳಷ್ಟೇ 54 ವರ್ಷ ಪೂರ್ತಿಗೊಳಿಸಿದ ಟೈಸನ್​ ತಮ್ಮ ಬಾಕ್ಸಿಂಗ್ ಮರುಪ್ರವೇಶದ ಸುಳಿವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. ನಿನ್ನೆಯಷ್ಟೇ ತಮ್ಮ ಹೊಸ ವೆಂಚರ್​ ಲೆಜೆಂಡ್ಸ್ ಓನ್ಲೀ ಲೀಗ್ ಬಗ್ಗೆ ಸುಳಿವು ನೀಡಿದ್ದ ಅವರು, ಎಲ್ಲ ಮಾದರಿಯ ಕ್ರೀಡೆಯ ಲೆಜೆಂಡ್​ಗಳನ್ನು ಮತ್ತೆ ಅಖಾಡಕ್ಕೆ ಇಳಿಸುವುದಾಗಿ ಘೋಷಿಸಿದ್ದರು.

ಸೆಪ್ಟೆಂಬರ್ 12ರಂದು ಮತ್ತೆ ಬಾಕ್ಸಿಂಗ್ ಅಖಾಡಕ್ಕೆ ಇಳಿದು ರಿಯಲ್​ರಾಯ್​ಜಾನ್ಸ್ ಜೂನಿಯರ್ ಜತೆಗೆ ಬಾಕ್ಸಿಂಗ್ ನಡೆಸುವುದಾಗಿ ಘೋಷಿಸಿದ್ದಾರೆ. ಈ ಪಂದ್ಯವು ಲಾಸ್ ಏಂಜಲೀಸ್​ನ ಡಿಗ್ನಿಟಿ ಹೆಲ್ತ್ ಸ್ಪೋರ್ಟ್ಸ್ ಪಾರ್ಕ್​ನಲ್ಲಿ ನಡೆಯಲಿದೆ. ಇದರ ನೇರ ಪ್ರಸಾರವನ್ನೂ ಲೆಜೆಂಡ್ಸ್​ ಓನ್ಲೀ ಲೀಗ್​ನಲ್ಲಿ ಶುಲ್ಕ ಪಾವತಿಸಿ ನೋಡಬಹುದಾಗಿದೆ.

ಇದಕ್ಕೂ ಮೇ 12ರಂದು ಮೈಕ್ ಟೈಸನ್ ಮತ್ತೆ ಅಖಾಡಕ್ಕೆ ಇಳಿಯುವ ಸುಳಿವು ನೀಡಿದ್ದರು. ಟೈಸನ್​ ನಿವೃತ್ತರಾಗುವ ಮುನ್ನ 58 ವೃತ್ತಿಪರ ಫೈಟ್​ಗಳನ್ನಾಡಿದ್ದು ಇದರಲ್ಲಿ 50 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. 2005ರಲ್ಲಿ ಕೆವಿನ್ ಮೆಕ್​ಬ್ರೈಡ್ ಎದುರು ಸೋಲು ಕಂಡ ನಂತರದಲ್ಲಿ ಅಖಾಡದಿಂದ ಹೊರಗುಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net