ಅಂತು ಇಂತು, ತವರಿಗೆ ಮರಳಿದ ಸಿಎಸ್​ಕೆ ಬ್ಯಾಟಿಂಗ್​ ಕೋಚ್​ ಮೈಕೆಲ್​ ಹಸ್ಸೆ..

hussey for web
Published on

ಚೆನ್ನೈ: ಕೋವಿಡ್​-19ರಿಂದ ಚೇತರಿಸಿಕೊಂಡಿರುವ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಬ್ಯಾಟಿಂಗ್​ ಕೋಚ್​ ಮೈಕೆಲ್​ ಹಸ್ಸೆ ಭಾನುವಾರ ದೋಹ ಮಾರ್ಗವಾಗಿ ತವರು ಆಸ್ಟ್ರೆಲಿಯಾದತ್ತ ಪ್ರಯಾಣ ಬೆಳೆಸಿದರು. ಆಸ್ಟ್ರೆಲಿಯಾದ ಮಾಜಿ ಬ್ಯಾಟ್ಸ್​ಮನ್​ಗೆ ಶುಕ್ರವಾರ ನಡೆಸಿದ ಟೆಸ್ಟ್​ನಲ್ಲಿ ವರದಿ ನೆಗೆಟಿವ್​ ಬಂದಿತ್ತು. ಆಸೀಸ್​ನ ಆಟಗಾರರು, ಸಹಾಯಕ ಸಿಬ್ಬಂದಿ ಉಳಿದುಕೊಂಡಿರುವ ಮಾಲ್ಡೀವ್ಸ್​ಗೆ ಪ್ರಯಾಣ ಬೆಳೆಸದೆ ದೋಹ ಮಾರ್ಗವಾಗಿ ಆಸೀಸ್​ನತ್ತ ಪ್ರಯಾಣಿಸಿದರು. ಭಾನುವಾರ ಮುಂಜಾನೆಯ ವಿಮಾನದಲ್ಲಿ ಪ್ರಯಾಣ ಮಾಡಿದರು ಎಂದು ಸಿಎಸ್​ಕೆ ಸಿಇಒ ಕೆಎಸ್​ ವಿಶ್ವನಾಥನ್​ ತಿಳಿಸಿದ್ದಾರೆ.

ಕೋವಿಡ್​-19 ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ 14ನೇ ಐಪಿಎಲ್​ ಟೂನಿರ್ಯೂ ಅನಿದಿರ್ಷ್ಟಾವಧಿವರೆಗೆ ಮುಂದೂಡಿಕೆಯಾದ ಬೆನ್ನಲ್ಲೇ ಹಸ್ಸೆಗೆ ಪಾಸಿಟಿವ್​ ಅಂಶಕಾಣಿಸಿಕೊಂಡಿತ್ತು. ಹಸ್ಸೆ ಸೋಮವಾರ ಬೆಳಗಿನ ವೇಳೆಗೆ ತವರು ಆಸ್ಟ್ರೆಲಿಯಾ ತಲುಪುವ ಸಾಧ್ಯತೆಗಳಿವೆ ಎನ್ನಲಾಗಿದೆ. ಹಸ್ಸೆ ಜತೆಗೆ ಸಿಎಸ್​ಕೆ ತಂಡದ ಬೌಲಿಂಗ್​ ಕೋಚ್​ ಎಲ್​.ಬಾಲಾಜಿಗೂ ಪಾಸಿಟಿವ್​ ಕಾಣಿಸಿಕೊಂಡಿತ್ತು. ಬಳಿಕ ಇಬ್ಬರನ್ನು ದೆಹಲಿಯಿಂದ ಚೆನ್ನೈಗೆ ಏರ್​ ಅಂಬುಲೆನ್ಸ್​ ಮೂಲಕ ಕರೆದೊಯ್ಯಲಾಗಿತ್ತು.

14ನೇ ಐಪಿಎಲ್​ ಟೂನಿರ್ಯೂ ಕೋವಿಡ್​ನಿಂದ ಮುಂದೂಡಿಕೆಯಾದ ಬಳಿಕ ಮಾಲ್ಡೀವ್ಸ್​ನಲ್ಲಿ ಕಳೆದ 12 ದಿನಗಳಿಂದ ಮಾಲ್ಡೀವ್ಸ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ 38 ಸದಸ್ಯರ ಆಸ್ಟ್ರೆಲಿಯಾ ತಂಡ ಇಂದು ತವರಿಗೆ ತೆರಳುವ ಸಾಧ್ಯತೆಗಳಿವೆ. ಮಾಲ್ಡೀವ್ಸ್​ನಲ್ಲಿ ಸರಣಿ ಕೋವಿಡ್​-19 ಟೆಸ್ಟ್​ ಎದುರಿಸಬೇಕಾದ ಹಿನ್ನೆಲೆಯಲ್ಲಿ ಹಸ್ಸೆ ನೇರವಾಗಿ ದೋಹಾ ಮಾರ್ಗವಾಗಿ ಆಸ್ಟ್ರೆಲಿಯಾಗೆ ಪ್ರಯಾಣ ಬೆಳೆಸುವಂತೆ ಸಿಎಸ್​ಕೆ ಆಡಳಿತ ಮಂಡಳಿ ವ್ಯವಸ್ಥೆ ಮಾಡಿತ್ತು. ವೇಗಿ ಪ್ಯಾಟ್​ ಕಮ್ಮಿನ್ಸ್​, ಡೇವಿಡ್​ ವಾರ್ನರ್​, ಸ್ಟೀವನ್​ ಸ್ಮಿತ್​, ವೀಕ್ಷಕ ವಿವರಣೆಗಾರ ಮೈಕೆಲ್​ ಸ್ಲೇಟರ್​ ಒಳಗೊಂಡ ಆಸ್ಟ್ರೆಲಿಯಾ ತಂಡ ಸಿಡ್ನಿಯತ್ತ ಪ್ರಯಾಣ ಬೆಳೆಸಲಿದೆ. ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ಚಾರ್ಟರ್​ ವಿಮಾನದ ಮೂಲಕ ಪರ್ತ್​ ಮಾರ್ಗವಾಗಿ ಸಿಡ್ನಿ ತಲುಪಲಿದ್ದಾರೆ. ತವರು ತಲುಪಿದ ಬಳಿಕ ಆಟಗಾರರು ಹೋಟೆಲ್​ನಲ್ಲಿ ಕ್ವಾರಂಟೈನ್​ಗೆ ಒಳಗಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net