ಮರಾಠಿ ನಟಿ ಜತೆಗೆ ಚೆನ್ನೈ ಸೂಪರ್‌ಕಿಂಗ್ಸ್ ಕ್ರಿಕೆಟಿಗನ ಡೇಟಿಂಗ್?

rutu web
Published on

ಪುಣೆ: ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಆಟಗಾರರಾಗಿರುವ ಮಹಾರಾಷ್ಟ್ರದ ಋತುರಾಜ್ ಗಾಯಕ್ವಾಡ್ ಮರಾಠಿ ನಟಿ ಸಯಾಲಿ ಸಂಜೀವ್ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರ ನಡುವೆ ನಡೆದಿರುವ ಮಾತುಕತೆ ಈ ಸುದ್ದಿ ಹರಡಲು ಕಾರಣವಾಗಿದೆ.

ಸಯಾಲಿ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ಒಂದಕ್ಕೆ ಋತುರಾಜ್ ಗಾಯಕ್ವಾಡ್, ‘ವೋವ್’ ಎಂದು ಕಾಮೆಂಟ್ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸಯಾಲಿ ಹೃದಯದ ಇಮೋಜಿಯನ್ನು ಹಾಕಿ ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ.

ಈ ನಡುವೆ ಸಯಾಲಿ ಜತೆಗಿನ ಡೇಟಿಂಗ್ ಸುದ್ದಿಯನ್ನು ನಿರಾಕರಿಸಿರುವ ಋತುರಾಜ್, ‘ಬೌಲರ್‌ಗಳು ಮಾತ್ರ ವಿಕೆಟ್ ತೆಗೆದುಕೊಳ್ಳಬಹುದು. ಅದೂ ಕ್ಲೀನ್ ಬೌಲ್ಡ್ ಮೂಲಕ. ಉಳಿದವರ‌್ಯಾರಿಗೂ ಅದು ಸಾಧ್ಯವಿಲ್ಲ. ಯಾರೆಲ್ಲ ಅರ್ಥಮಾಡಿಕೊಳ್ಳಲು ಸಾಧ್ಯವೋ ಅರ್ಥ ಮಾಡಿಕೊಳ್ಳಿ’ ಎಂದು ಮರಾಠಿಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಯುಎಇಯಲ್ಲಿ ನಡೆದ ಐಪಿಎಲ್‌ನಲ್ಲಿ 6 ಇನಿಂಗ್ಸ್‌ಗಳಲ್ಲಿ ಸತತ 3 ಅರ್ಧಶತಕಗಳ ಸಹಿತ 204 ರನ್ ಸಿಡಿಸಿ ಮಿಂಚಿದ್ದ ಋತುರಾಜ್ ಗಾಯಕ್ವಾಡ್, ಈ ವರ್ಷ ಆಡಿದ 7 ಪಂದ್ಯಗಳಲ್ಲಿ 2 ಅರ್ಧಶತಕಗಳ ಸಹಿತ 196 ರನ್ ಗಳಿಸಿ ಸಿಎಸ್‌ಕೆ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net