ಕೆಕೆಆರ್​ ವಿರುದ್ಧ 8 ವಿಕೆಟ್​ಗಳ ಭರ್ಜರಿ ಜಯ! ಮುಂಬೈ ಪರ ಸೂರ್ಯ, ಅಶ್ವನಿ ಮಿಂಚು | MI vs KKR

ವಿಜಯವಾಣಿ - 2025-03-31T222333.110
Published on

MI vs KKR: ಇಂದು (ಮಾ.31) ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 18ನೇ ಆವೃತ್ತಿಯ 12ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ ನೈಟ್ ರೈಡರ್ಸ್​ ತಂಡಗಳು ಮುಖಾಮುಖಿಯಾಗಿ ಸೆಣಸಾಡಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್​ ಕೇವಲ 16.2 ಓವರ್​ ಅಂತ್ಯಕ್ಕೆ 116 ರನ್ ಕಲೆಹಾಕುವ ಮೂಲಕ ಆಲ್​​ಔಟ್ ಆಯಿತು. ಈ ಸಾಧಾರಣ, ಸುಲಭ ಗುರಿಯನ್ನು ಬೆನ್ನಟ್ಟಿದ ಮುಂಬೈ 8 ವಿಕೆಟ್​ಗಳ ಜಯ ಸಾಧಿಸಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾರ್ದಿಕ್ ಪಾಂಡ್ಯ, ಕೆಕೆಆರ್​ಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೋಲ್ಕತ ಪಡೆ, ಕೇವಲ 116 ರನ್​ಗೆ ಆಲೌಔಟ್ ಆಯಿತು. ಇದು ಈ ಬಾರಿ ಐಪಿಎಲ್​ನ ಅತ್ಯಂತ ಕಡಿಮೆ ರನ್​ಸ್ಕೋರ್​ ಎಂಬ ಪಟ್ಟಿಗೆ ಸೇರಿಕೊಂಡಿದತು. ಈ ಗುರಿಯನ್ನು ಬೆನ್ನಟ್ಟಿದ ಎಂಐ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

ಮುಂಬೈ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ರಿಯಾನ್​ (41 ಎಸೆತಕ್ಕೆ 62 ರನ್​) ಮತ್ತು ಸೂರ್ಯಕುಮಾರ್ ಯಾದವ್​ (9 ಎಸೆತ 27 ರನ್​) ಬಾರಿಸಿ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇನ್ನು ಬೌಲಿಂಗ್​ನಲ್ಲಿ ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಯುವ ಬೌಲರ್ ಅಶ್ವನಿ ಕಮಾರ್​, 3 ಓವರ್​ಗೆ ಕೇವಲ 24 ರನ್ ಕೊಟ್ಟು, ಬರೋಬ್ಬರಿ 4 ವಿಕೆಟ್​ಗಳನ್ನು ಪಡೆದು ತಂಡದ ಪರ ಮಿಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net