

MI vs PBKS: ಇಂದು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿ ಸೆಣಸುತ್ತಿವೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿರುವ ಪಂಜಾಬ್, ಹಾರ್ದಿಕ್ ಪಡೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟಿಂಗ್ ಮಾಡಿದ ಎಂಐ, 20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 184 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಲಿರುವ ಶ್ರೇಯಸ್ ಅಯ್ಯರ್ ಪಡೆ, ಗೆದ್ದು ಕ್ವಾಲಿಫೈರ್ 1ಗೆ ಹೋಗಲಿದ್ಯಾ ಅಥವಾ ಮುಂಬೈಗೆ ಶರಣಾಗಲಿದೆಯಾ? ಎಂಬುದೇ ಸದ್ಯ ಕಾಡುತ್ತಿರುವ ಪ್ರಶ್ನೆ.
ಇಂದಿನ ಮುಂಬೈ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಅನ್ನೋದು ಕ್ರಿಕೆಟ್ ಪ್ರಿಯರ ಕೌತುಕ. ನಾಲ್ಕನೇ ಸ್ಥಾನದಲ್ಲಿರುವ ಎಂಐ, ಪಂಜಾಬ್ ವಿರುದ್ಧ ಗೆದ್ದರೆ, ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದು ಮಾತ್ರವಲ್ಲದೇ ನೇರವಾಗಿ ಕ್ವಾಲಿಫೈರ್ 1ಕ್ಕೆ ಎಂಟ್ರಿಕೊಡಲಿದೆ. ಅಕಸ್ಮಾತ್ ಎರಡನೇ ಸ್ಥಾನದಲ್ಲಿರುವ ಪಂಜಾಬ್ ಗೆದ್ದರೆ, ಶ್ರೇಯಸ್ ಪಡೆ ಕ್ವಾಲಿಫೈರ್ 1ಕ್ಕೆ ನೇರ ಪ್ರವೇಶ ಪಡೆಯಲಿದೆ. ಒಟ್ಟಿನಲ್ಲಿ ಯಾರಿಗೆ ಈ ಭಾಗ್ಯ ದೊರೆಯಲಿದೆ ಎಂಬುದನ್ನು ಸೆಕೆಂಡ್ ಇನ್ನಿಂಗ್ಸ್ ಬಳಿಕವೇ ತಿಳಿಯಬೇಕಿದೆ.