

ನವದೆಹಲಿ: ಟೀಮ್ ಇಂಡಿಯಾ ಆಟಗಾರರು ಮುಂಬರುವ ಏಷ್ಯಾಕಪ್ ವೇಳೆ ಮೊದಲ ಬಾರಿಗೆ 'ಪಾಕಿಸ್ತಾನ' ಎಂದು ಬರೆದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ!
ಏಷ್ಯಾಕಪ್ಗೆ ಪಾಕಿಸ್ತಾನ ಮೂಲ ಆತಿಥೇಯ ದೇಶ ಆಗಿರುವುದರಿಂದ ಟೂರ್ನಿಯ ಲಾಂಛನದ ಜತೆಗೆ ಅದರ ಹೆಸರಿದೆ. ಹೀಗಾಗಿ ಭಾರತ ತಂಡದ ಜೆರ್ಸಿಯ ಬಲ ಎದೆಭಾಗದಲ್ಲಿ ಟೂರ್ನಿಯ ಲಾಂಛನವನ್ನು ಮುದ್ರಿಸಿದಾಗ ಅದರಲ್ಲಿ ಪಾಕಿಸ್ತಾನದ ಹೆಸರು ಕೂಡ ದಾಖಲಾಗಿದೆ. ಎಡ ಎದೆಭಾಗದಲ್ಲಿ ಬಿಸಿಸಿಐ ಲಾಂಛನ ಇರುತ್ತದೆ.
ಈ ಮುನ್ನ 2021ರಲ್ಲಿ ಭಾರತದ ಆತಿಥ್ಯದ ಟಿ20 ವಿಶ್ವಕಪ್ ಯುಎಇಯಲ್ಲಿ ನಡೆದಾಗ ಪಾಕಿಸ್ತಾನ ತಂಡ ಟೂರ್ನಿ ಲಾಂಛನದೊಂದಿಗೆ 'ಇಂಡಿಯಾ' ಎಂದು ಬರೆದ ಜೆರ್ಸಿ ಧರಿಸಿ ಆಡಿತ್ತು ಎಂಬುದು ಗಮನಾರ್ಹ.