ಒಲಿಂಪಿಕ್ಸ್​ ಪದಕ ಗೆದ್ದ ಬೆನ್ನಲ್ಲೇ 12 ಕಂಪನಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಮನು ಭಾಕರ್​!

web manu
Published on

ನವದೆಹಲಿ: ಪ್ಯಾರಿಸ್​ ಒಲಿಂಪಿಕ್ಸ್​ ಪದಕ ಸಾಧನೆಯ ಬಳಿಕ ತನ್ನ ಚಿತ್ರಗಳನ್ನು ಬಳಸಿ, ತನಗೆ ಅಭಿನಂದನೆ ಸಲ್ಲಿಸುವ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನಧಿಕೃತವಾಗಿ ಪ್ರಕಟಿರುವ 12 ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಶೂಟರ್​ ಮನು ಭಾಕರ್​ ಮುಂದಾಗಿದ್ದಾರೆ.

ಈ 12 ಬ್ರ್ಯಾಂಡ್​​ಗಳು ತನಗೆ ಪ್ರಾಯೋಜಕತ್ವ ನೀಡಿರದಿದ್ದರೂ ಮತ್ತು ತನ್ನನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳದಿದ್ದರೂ, ಇದೀಗ ತನ್ನ ಯಶಸ್ಸಿನಲ್ಲಿ ಪಾಲು ಪಡೆಯಲು ಮುಂದಾಗುವ ಮೂಲಕ ಉಚಿತ ಮಾರ್ಕೆಟಿಂಗ್​ ಮಾಡಿವೆ ಎಂದು ಆರೋಪಿಸಿರುವ ಮನು ಭಾಕರ್​ ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ತಂಡ, ಕಾನೂನು ನೋಟಿಸ್​ ಕಳುಹಿಸಲು ಸಿದ್ಧತೆ ನಡೆಸಿದೆ.

ಮನು ಸದ್ಯ "ಪಾಮ್ಯಾಕ್ಸ್​ ಆಕ್ಟಿವ್​ವೇರ್​'ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ. ಆದರೆ ಇತರ ಕೆಲ ಬ್ರ್ಯಾಂಡ್​ಗಳು ಮನು ಚಿತ್ರ ಮತ್ತು ವಿಡಿಯೋ ಜತೆಗೆ ತನ್ನ ಬ್ರ್ಯಾಂಡ್​ ಲಾಂಛನವನ್ನೂ ಬಳಸಿ ಅಭಿನಂದನೆಯ ಪೋಸ್ಟ್​ ಹಾಕಿವೆ. ಇದು ಭಾರತದಲ್ಲಿ ಕಾನೂನುಬಾಹಿರ ಎನಿಸಿದೆ. ವ್ಯಕ್ತಿಯೊಬ್ಬರಿಗೆ ಪ್ರಾಯೋಜಕತ್ವ ಒಪ್ಪಂದ ನೀಡದೆ ಅವರ ಚಿತ್ರಗಳ ಹಕ್ಕು ಪಡೆದುಕೊಳ್ಳುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net