ಮನಿಕಾ ಬಾತ್ರಾ ಜತೆಗೂಡಿ ಟಿಟಿ ಪ್ರಶಸ್ತಿ ಗೆದ್ದ ಕನ್ನಡತಿ ಅರ್ಚನಾ ಕಾಮತ್

archana kamat manika web
Published on

ಲಾಸ್ಕೋ (ಸ್ಲೊವೇನಿಯ): ಅನುಭವಿ ಆಟಗಾರ್ತಿ ಮನಿಕಾ ಬಾತ್ರಾ ಮತ್ತು ಕನ್ನಡತಿ ಅರ್ಚನಾ ಕಾಮತ್ ಜೋಡಿ ಡಬ್ಲ್ಯುಟಿಟಿ ಕಂಟೆಂಡರ್ ಲಾಸ್ಕೋ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ವಿಭಾಗದ ಪ್ರಶಸ್ತಿ ಜಯಿಸಿದೆ. ಮನಿಕಾ-ಅರ್ಚನಾ ಜತೆಯಾಗಿ ಗೆದ್ದ ಮೊದಲ ಪ್ರಶಸ್ತಿ ಇದಾಗಿದೆ.

ವಿಶ್ವ ನಂ. 36 ಮನಿಕಾ-ಅರ್ಚನಾ ಜೋಡಿ 23ನೇ ಶ್ರೇಯಾಂಕಿತ ಪೋರ್ಟೋರಿಕೋದ ಮೆಲಾನಿ ಡಯಾಜ್ ಮತ್ತು ಆಂಡ್ರಿಯಾನಾ ಡಯಾಜ್ ಜೋಡಿಯನ್ನು 11-3, 11-8, 12-10ರಿಂದ ಸೋಲಿಸಿತು. 3ನೇ ಟೆಸ್ಟ್‌ನಲ್ಲಿ 4 ಗೇಮ್ ಪಾಯಿಂಟ್ ರಕ್ಷಿಸಿಕೊಳ್ಳುವ ಮೂಲಕ ಮನಿಕಾ-ಅರ್ಚನಾ ಜೋಡಿ ಗೆಲುವು ಒಲಿಸಿಕೊಂಡಿತು.

ಅವರು ಸೆಮೀಸ್‌ನಲ್ಲಿ ಚೀನಾದ ಲಿಯು ವೆಶಾನ್ ಮತ್ತು ವಾಂಗ್ ಯಿಡಿ ಜೋಡಿಗೆ ಆಘಾತ ನೀಡಿದ್ದರು. ಮನಿಕಾ ಸಿಂಗಲ್ಸ್ ವಿಭಾಗದಲ್ಲಿ ಕಂಚು ಜಯಿಸಿದ್ದರೆ, ಅರ್ಚನಾ ಮಿಶ್ರ ಡಬಲ್ಸ್ ವಿಭಾಗದಲ್ಲಿ ಮಾನವ್ ಠಕ್ಕರ್ ಜತೆಗೂಡಿ ಕಂಚು ಗೆದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net