ಈ ಮೂರು ಬದಲಾವಣೆ ಮಾಡಿ... 2ನೇ ಟೆಸ್ಟ್​ನಲ್ಲೂ ಭಾರತಕ್ಕೆ ಗೆಲುವು: ಗವಾಸ್ಕರ್​ ನುಡಿದ ಭವಿಷ್ಯ ಇದು | Test

Test
Published on

ನವದೆಹಲಿ: ಇದೇ ಡಿಸೆಂಬರ್ 6 ರಂದು ಅಡಿಲೇಡ್​ನಲ್ಲಿ(Test) ಭಾರತ- ಆಸ್ಟ್ರೇಲಿಯಾ ಮಧ್ಯೆ ಆರಂಭವಾಗಲಿರುವ ಪಿಂಕ್​ಬಾಲ್​ ಟೆಸ್ಟ್​ ಟೀಮ್​ ಪ್ಲೇಯಿಂಗ್​ ಇಲೆವನ್​ನಲ್ಲಿ ಕೆಲ ಬದಲಾವಣೆ ಮಾಡಿಕೊಂಡರೆ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾದ ಗೆಲುವು ಸುಭವಾಗಲಿದೆ ಎಂದು ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸುನಿಲ್​ ಗವಾಸ್ಕರ್​ ಭವಿಷ್ಯ ನುಡಿದಿದ್ದಾರೆ.

ಎರಡನೇ ಮಗುವಿನ ಜನ್ಮದಿನ ಅಂಗವಾಗಿ ಮೊದಲ ಟೆಸ್ಟ್​ನಲ್ಲಿ ಗೈರಾಗಿದ್ದ ನಾಯಕ ರೋಹಿತ್​ ಶರ್ಮಾ ಮತ್ತು ಅಭ್ಯಾಸ ಪಂದ್ಯದ ವೇಳೆ ಹೆಬ್ಬೆರಳು ಗಾಯದಿಂದ ದೂರ ಉಳಿದಿದ್ದ ಸ್ಟಾರ್​ ಬ್ಯಾಟರ್​ ಶುಭಮನ್ ​ಗಿಲ್ ಅಡಿಲೇಡ್​ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ಗೆ ಮರಳು ಸಾಧ್ಯತೆ ಇದೆ ಎಂದು ಗವಾಸ್ಕರ್​ ಹೇಳಿದ್ದಾರೆ.

ಸಂದರ್ಶನವೊದಂರಲ್ಲಿ ಮಾತನಾಡಿರುವ ಅವರು, ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿರುವ ಭಾರತ. ಮುಂದಿನ ಪಂದ್ಯಗಳನ್ನು ಗೆಲ್ಲಲು ಕೆಲ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ. ದೇವದತ್​​ ಪಡಿಕಲ್​ ಮತ್ತು ಧ್ರುವ್​ ಜುರೆಲ್​ ಬದಲಿಗೆ ರೋಹಿತ್​ ಮತ್ತು ಗಿಲ್ ಆಡುವ ಮೂಲಕ ಮ್ಯಾನೆಂಜ್​ಮೆಂಟ್​ ಕ್ರಮಾಂಕದ ಪ್ರಕಾರ ಈ ಬಾರಿ ಆಡಲಿದ್ದಾರೆ ಎಂದು ಹೇಳಿದ್ದಾರೆ.

ರೋಹಿತ್​ ಅನುಪಸ್ಥಿತಿಯಲ್ಲಿ ಕೆ.ಎಲ್​.ರಾಹುಲ್​ ಬ್ಯಾಟ್ ಮಾಡಿದರೆ, ಮಧ್ಯದ ಕ್ರಮಾಂಕದಲ್ಲಿ ಏರುಪೇರು ಆಗುತ್ತದೆ ಎಂಬುವುದು ನನ್ನ ಅನಿಸಿಕೆ. ಹೀಗಾಗಿ, ಒಂದು ವೇಳೆ ರೋಹಿತ್​ ಮತ್ತು ಗಿಲ್​ ಮರಳಿದರೆ ಬ್ಯಾಟಿಂಗ್​ ಕ್ರಮಾಂಕ ಬದಲಾಗಲಿದೆ. ಅಲ್ಲದೆ, ರಾಹುಲ್​ ಬದಲಿಗೆ ರೋಹಿತ್​ ಬಂದು ಬ್ಯಾಟ್​ ಬೀಸಿದರೆ, ಪಡಿಕಲ್​ ಮತ್ತು ​​ಧ್ರುವ್​ ಜುರೆಲ್​ ಬದಲಿಗೆ ಗಿಲ್​ ಆಡಲಿದ್ದಾರೆ. ಕೆ.ಎಲ್​.ರಾಹುಲ್​ 6ನೇ ಸ್ಥಾನದಲ್ಲಿ ಬ್ಯಾಟ್​ಗೆ ಬರುತ್ತಾರೆ ಎಂದು ನನ್ನ ಭಾವನೆ ಎಂದು ಹೇಳಿದ ಗವಾಸ್ಕರ್​, ಇದಲ್ಲದೆ, ವಾಷಿಂಗ್​ಟನ್​ ಸುಂದರ್ ಬದಲಿಗೆ ರವಿಂದ್ರ ಜಡೇಜಾ ಕಣಕ್ಕೆ ಇಳಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಮೊದಲ ಟೆಸ್ಟ್​ ಸರಣಿ

ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಭಾರತ 295 ರನ್​ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್​ ಆಡಿಲೇಡ್​ನಲ್ಲಿ ಆರಂಭವಾಗಲಿದೆ,(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net