ಮಾಗಡಿ ಕ್ರಿಕೆಟ್​ ಅಕಾಡೆಮಿಗೆ ಅರ್ಜುನ ಕಪ್​

web arjuna
Published on

ಬೆಂಗಳೂರು: ಎಂಟು ವರ್ಷಗಳ ಕಾಲ ದಸರಾ ಅಂಬಾರಿ ಹೊತ್ತ ಅರ್ಜುನ ಆನೆಯ ಸ್ಮರಣಾರ್ಥ ನಡೆದ ಎವಿಆರ್​-ಅರ್ಜುನ ಕಪ್​ 14 ವಯೋಮಿತಿ ಕ್ರಿಕೆಟ್​ ಟೂರ್ನಿಯಲ್ಲಿ ಮಾಗಡಿ ಕ್ರಿಕೆಟ್​ ಅಕಾಡೆಮಿ ತಂಡ ಪ್ರಶಸ್ತಿ ಗೆದ್ದುಕೊಂಡಿದೆ.

ಸತ್ವ ಗ್ಲೋಬಲ್​ ಸಿಟಿ ಗ್ರೌಂಡ್​ನಲ್ಲಿ ಮಂಗಳವಾರ ನಡೆದ ಫೈನಲ್​ ಪಂದ್ಯದಲ್ಲಿ ಮಾಗಡಿ ತಂಡ ಪ್ಲೇ ಸ್ಮಾರ್ಟ್​ ಕ್ರಿಕೆಟ್​ ಅಕಾಡೆಮಿ ತಂಡವನ್ನು 2 ರನ್​ಗಳಿಂದ ರೋಚಕವಾಗಿ ಮಣಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಮಾಗಡಿ ಕ್ರಿಕೆಟ್​ ಅಕಾಡೆಮಿ ತಂಡ, ಜಸ್​ಪ್ರೀತ್​ (36ಕ್ಕೆ 3), ಅಥರ್ವ ಕರಡಿ (40ಕ್ಕೆ 3) ದಾಳಿಗೆ ಕುಸಿದು 29.1 ಓವರ್​ಗಳಲ್ಲಿ 201 ರನ್​ಗಳಿಗೆ ಆಲೌಟ್​ ಆಯಿತು. ಅಯತ್​ ರಹೀಂ ಖಾನ್​ (61), ಶಿಶರ್​ ಅರವಿಂದ್​ (47) ಉತ್ತಮ ಕೊಡುಗೆ ನೀಡಿದರು.

ಪ್ರತಿಯಾಗಿ ಪ್ಲೇ ಸ್ಮಾರ್ಟ್​ ಕ್ರಿಕೆಟ್​ ತಂಡ ಗಗನ್​ ಯಶ್​ಪಾಲ್​ (65), ಅಥರ್ವ ಕರಡಿ (50) ಅರ್ಧಶತಕದಾಟದ ನಡುವೆ 30 ಓವರ್​ಗಳಲ್ಲಿ 8 ವಿಕೆಟ್​ಗೆ 199 ರನ್​ ಗಳಿಸಿ ವಿರೋಚಿತ ಸೋಲು ಅನುಭವಿಸಿತು. ಯೆಶ್ವಿನ್​ ರಮೇಶ್​ (23ಕ್ಕೆ 3) ಮತ್ತು ಆಕರ್ಷ್​ ಎಂ. (34ಕ್ಕೆ 3) ಬಿಗಿ ದಾಳಿ ಸಂಟಿಸಿದರು. ಆಕರ್ಷ್​ ಎಂ. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net