ಐಪಿಎಸ್​ ಅಧಿಕಾರಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಗೆದ್ದ ಧೋನಿ; ಇಲ್ಲಿದೆ ಕೇಸ್​ ಡಿಟೇಲ್ಸ್​...

dhoni web
Published on

ಚೆನ್ನೈ: ಫಿಕ್ಸಿಂಗ್​ ಆರೋಪ ಮಾಡಿದ್ದ ತಮಿಳುನಾಡಿನ ಐಪಿಎಸ್​ ಅಧಿಕಾರಿ ಜಿ. ಸಂಪತ್​ ಕುಮಾರ್​ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಟೀಮ್​ ಇಂಡಿಯಾ ಮಾಜಿ ನಾಯಕ ಎಂಎಸ್​ ಧೋನಿ ಗೆಲುವು ಸಾಧಿಸಿದ್ದಾರೆ. ಸಂಪತ್​ ಕುಮಾರ್​ಗೆ ಮದ್ರಾಸ್​ ಹೈಕೋರ್ಟ್​ 15 ದಿನಗಳ ಕಾರಾಗೃಹ ಶಿಕ್ಷೆ ಪ್ರಕಟಿಸಿದೆ.

ನ್ಯಾಯಮೂರ್ತಿಗಳಾದ ಎಸ್​ಎಸ್​ ಸುಂದರ್​ ಮತ್ತು ಸುಂದರ್​ ಮೋಹನ್​ ಒಳಗೊಂಡ ವಿಭಾಗೀಯ ಪೀಠ, ಜೈಲು ಶಿಕ್ಷೆಯನ್ನು 30 ದಿನಗಳ ಕಾಲ ಅಮಾನತಿನಲ್ಲಿಟ್ಟಿದ್ದು, ಸಂಪತ್​ ಕುಮಾರ್​ಗೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಸಮಯಾವಕಾಶ ಕಲ್ಪಿಸಿದೆ.

ಪ್ರಕರಣದ ಹಿನ್ನೆಲೆ: 2013ರಲ್ಲಿ ಐಪಿಎಲ್​ ಬೆಟ್ಟಿಂಗ್​ ಪ್ರಕರಣ ಭುಗಿಲೆದ್ದಾಗ ಸಂಪತ್​ ಕುಮಾರ್​, ಧೋನಿ ವಿರುದ್ಧ ಫಿಕ್ಸಿಂಗ್​ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಧೋನಿ 2014ರಲ್ಲಿ ಸಂಪತ್​ ವಿರುದ್ಧ 100 ಕೋಟಿ ರೂ. ಮೊತ್ತದ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಇದರಿಂದ ನ್ಯಾಯಾಲಯ, ಧೋನಿ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಸೂಚಿಸಿತ್ತು. ಆದರೂ, ಪ್ರಕರಣದಲ್ಲಿ ಸಂಪತ್​ ಸಲ್ಲಿಸಿದ್ದ ಅಫಿಡವಿತ್​ನಲ್ಲಿ ಮತ್ತೆ ಧೋನಿ ವಿರುದ್ಧ ಫಿಕ್ಸಿಂಗ್​ ಆರೋಪಗಳನ್ನು ಮುಂದುವರಿಸಿದ್ದರು. ಹೀಗಾಗಿ ಧೋನಿ, ಸಂಪತ್​ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನೂ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net