More

  ಗಂಭೀರ ಗಾಯ, ಬ್ಯಾಂಡೇಜ್​ನೊಂದಿಗೆ ಆಡಿ ಮನಗೆದ್ದ ತಮಿಳುನಾಡಿನ ಆಲ್ರೌಂಡರ್​ ಬಾಬಾ ಇಂದ್ರಜಿತ್​!

  ರಾಜ್​ಕೋಟ್: ತಮಿಳುನಾಡಿನ ಆಲ್ರೌಂಡರ್​ ಬಾಬಾ ಇಂದ್ರಜಿತ್​ ತುಟಿಗೆ ಆದ ಗಂಭೀರ ಗಾಯದಿಂದಾಗಿ ಬಾಯಿತುಂಬ ಬ್ಯಾಂಡೇಜ್​ ಹಚ್ಚಿಕೊಂಡಿದ್ದ ನಡುವೆಯೂ ವಿಜಯ್​ ಹಜಾರೆ ಟ್ರೋಫಿಯ ಮೊದಲ ಸೆಮಿಫೈನಲ್​ನಲ್ಲಿ ಹರಿಯಾಣ ಎದುರು ಕಣಕ್ಕಿಳಿದಿದ್ದಲ್ಲದೆ, 64 ರನ್​ ಬಾರಿಸಿ ಗಮನಸೆಳೆದರು.

  29 ವರ್ಷದ ಬಾಬಾ ಇಂದ್ರಜಿತ್​ ಅವರ ಈ ಸಾಹಸದಿಂದ ತಮಿಳುನಾಡಿಗೆ ಗೆಲುವು ತಂದುಕೊಡದಿದ್ದರೂ, ಕ್ರಿಕೆಟ್​ ಪ್ರೇಮಿಗಳ ಮನಗೆಲ್ಲುವಲ್ಲಿ ಯಶಸ್ವಿಯಾದರು.

  ಬುಧವಾರ ನಡೆದ ಪಂದ್ಯದಲ್ಲಿ ಇನಿಂಗ್ಸ್​ ವಿರಾಮದ ನಡುವೆ ಬಾತ್​ರೂಂನಲ್ಲಿ ಜಾರಿಬಿದ್ದ ಕಾರಣದಿಂದಾಗಿ ಬಾಬಾ ಇಂದ್ರಜಿತ್​ ತುಟಿಗೆ ಗಾಯವಾಗಿತ್ತು. ಇದರಿಂದ ತುಟಿಗೆ ಹಲವು ಸ್ಟಿಚ್​ ಕೂಡ ಬಿದ್ದಿತ್ತು. ಇದರ ನಡುವೆಯೂ ಆಡಿದ ಅವರನ್ನು, ವೆಸ್ಟ್​ ಇಂಡೀಸ್​ನಲ್ಲಿ ದವಡೆಗೆ ಗಾಯವಾಗಿದ್ದರೂ, ಬ್ಯಾಂಡೇಜ್​ ಕಟ್ಟಿಕೊಂಡು ಆಡಿ ದಿಟ್ಟತನ ತೋರಿದ್ದ ಕನ್ನಡಿಗ ಅನಿಲ್​ ಕುಂಬ್ಳೆ ಅವರ ಸಾಹಸದೊಂದಿಗೆ ಹೋಲಿಸಲಾಗುತ್ತಿದೆ.

  2023ರಲ್ಲಿ ಐಪಿಎಲ್ ಬ್ರಾಂಡ್​ ಮೌಲ್ಯ ಶೇ. 28 ಪ್ರಗತಿ; ಹೀಗಿದೆ ಕಾರಣ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts