ಪಂಜಾಬ್​ ಬ್ಯಾಟರ್​ಗೆ ಅಣಕಿಸಿದ ಬೌಲರ್ ದಿಗ್ವೇಶ್ ರಥಿ! LSG ವೇಗಿ ಅವತಾರಕ್ಕೆ ಸುನಿಲ್ ಗವಾಸ್ಕರ್​ ಕಿಡಿ

ವಿಜಯವಾಣಿ - 2025-04-01T221632.695
Published on

LSG vs PBKS: ಇಂದು (ಏ.01) ಲಖನೌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್​ 18ನೇ ಆವೃತ್ತಿಯ 13ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್​ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್​, ಎಲ್​ಎಸ್​ಜಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಬ್ಯಾಟ್ ಮಾಡಿದ ಎಲ್​ಎಸ್​ಜಿ, 20 ಓವರ್ ಅಂತ್ಯಕ್ಕೆ 172 ರನ್​ಗಳ ಗುರಿಯನ್ನು ನೀಡಿತು.

ಈ ಸುಲಭ ಗುರಿಯನ್ನು ಬೆನ್ನಟ್ಟಿರುವ ಪಂಜಾಬ್ ಕಿಂಗ್ಸ್ ಬಹಳ ಆರಾಮದಾಯಕವಾಗಿ ಗುರಿಯನ್ನು ತಲುಪುವತ್ತ ಸಾಗಿದೆ. ಈ ವೇಳೆ ಕಿಂಗ್ಸ್ ಪರ ಆರಂಭಿಕ ಬ್ಯಾಟರ್​ ಆಗಿ ಕಣಕ್ಕಿಳಿದ ಪ್ರಿಯಾಂಶು ಆರ್ಯ ಕೇವಲ 8 ರನ್​ಗೆ ದಿಗ್ವೇಶ್ ರಥಿ ಬೌಲಿಂಗ್​ನಲ್ಲಿ ವಿಕೆಟ್​ ಕಳೆದುಕೊಂಡರು. ಆರ್ಯ ವಿಕೆಟ್​ ಕಬಳಿಸಿದ್ದೇ ತಡ ಬ್ಯಾಟರ್​ ಎದುರೇ ಅಣಕಿಸಿದರು. ಇಷ್ಟಾದರೂ ಹೆಚ್ಚು ಮಾತನಾಡದ ಪ್ರಿಯಾಂಶು, ಸುಮ್ಮನೆ ಪೆವಿಲಿಯನ್​ನತ್ತ ಮುಖ ಮಾಡಿದರು.

ಎಲ್​ಎಸ್​ಜಿ ಬೌಲರ್ ನಡೆಗೆ ಸಿಟ್ಟಾದ ಅಂಪೈರ್​, ವೇಗಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ಕಮೆಂಟರಿ ಬಾಕ್ಸ್​ನಲ್ಲಿದ್ದ ಟೀಮ್ ಇಂಡಿಯಾ ದಿಗ್ಗಜ, ಸುನಿಲ್ ಗವಾಸ್ಕರ್​ ವೇಗಿ ವಿರುದ್ಧ ತೀವ್ರ ಕಿಡಿಕಾರಿದರು. ಪ್ರಿಯಾಂಶು ಮತ್ತು ದಿಗ್ವೇಶ್​ ದೃಶ್ಯ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net