VIDEO: ಮೈದಾನದೊಳಗೆ ನುಗ್ಗಿ ಬಂದ ಬಾಲಕ; ರೋಹಿತ್ ವರ್ತನೆ ನೋಡಿ ಕಿಡಿಕಾರಿದ ನೆಟ್ಟಿಗರು!

Rohith Sharma
Published on

ಮೆಲ್ಬೋರ್ನ್​​: ಟಿ-20 ವಿಶ್ವಕಪ್​ ಭಾರತ ಮತ್ತು ಜಿಂಬಾಬ್ವೆ ನಡುವಣ ಪಂದ್ಯದಲ್ಲಿ ಭಾರತ 71ರನ್​​ಗಳ ಅಂತರದಿಂದ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಜಿಂಬಾಬ್ವೆ ತಂಡಕ್ಕೆ 187ರನ್​ಗಳ ಟಾರ್ಗೆಟ್ ನೀಡಿತ್ತು.

ಬಿಂಬಾಬ್ವೆ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ 16ನೇ ಓವರ್​ನಲ್ಲಿ ಹಾರ್ದಿಕ್ ಪಾಂಡ್ಯಾ ಬೌಲಿಂಗ್ ಮಾಡುತ್ತಿದ್ದರು. ಈ ಬಾಲಕನೊಬ್ಬ ಭಾರತದ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೈದಾನಕ್ಕೆ ನುಗ್ಗಿದ್ದಾನೆ. ಭಧ್ರತಾ ಸಿಬ್ಬಂದಿಗಳ ಅರಿವಿಗೆ ಬಾರದಂತೆ ಬಾಲಕ ಮೈದಾನದ ಒಳಬಂದು ರೋಹಿತ್​ ಶರ್ಮಾ ಬಳಿ ಬಂದಿದ್ದಾನೆ.

ಬಾಲಕ ರೋಹಿತ್ ಶರ್ಮಾ ಅಭಿಮಾನಿಯಾಗಿದ್ದ. ಹೀಗಾಗಿ ರೋಹಿತ್​ ಅವರನ್ನು ಭೇಟಿಯಾಗಲೆಂದು ಭಧ್ರತಾ ಸಿಬ್ಬಂದಿಗಳಿಗೆ ಗೊತ್ತಾಗದಂತೆ ಒಳಬಂದಿದ್ದಾನೆ. ಮೈದಾನಕ್ಕೆ ನುಗ್ಗಿರುವುದು ಗೊತ್ತಾಗುತ್ತಿದ್ದಂತೆ ಎಚ್ಚೆತ್ತ ಸಿಬ್ಬಂದಿಗಳು, ಕೂಡಲೇ ಬಾಲಕನನ್ನು ತಡೆದಿದ್ದಾರೆ. ಇದರಿಂದಾಗ ಕೂದಲೆಳೆ ಅಂತರದಲ್ಲಿ ಬಾಲಕನಿಗೆ ತನ್ನ ನೆಚ್ಚಿನ ಆಟಗಾರ​ನನ್ನು ಭೇಟಿಯಾಗುವ ಅವಕಾಶ ತಪ್ಪಿದೆ. ನಂತರ ಸಿಬ್ಬಂದಿಗಳು ಬಾಲಕನನ್ನು ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ.

ರೋಹಿತ್​ ಶರ್ಮಾ ಅವರ ಹತ್ತಿರಕ್ಕೆ ಬರುತ್ತಿದ್ದಂತೆ, ಸಿಬ್ಬಂದಿಗಳು ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ರೋಹಿತ್ ಶರ್ಮಾ ನಡೆಯನ್ನು ಟೀಕಿಸುತ್ತಿದ್ದಾರೆ. ಅಷ್ಟು ಹತ್ತಿರ ಬಂದ ಬಾಲಕನನ್ನು ಮಾತನಾಡಿಸದೆ ರೋಹಿತ್ ಸುಮ್ಮನಾಗಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net